Advertisement

2nd ODI: ಆಸ್ಟ್ರೇಲಿಯ ತಂಡದೆದುರು ಗೆಲುವಿನ ನಿರೀಕ್ಷೆಯಲ್ಲಿ ಭಾರತ ವನಿತೆಯರು

11:41 PM Dec 29, 2023 | Team Udayavani |

ಮುಂಬಯಿ: ಪ್ರವಾಸಿ ಆಸ್ಟ್ರೇಲಿಯ ತಂಡದೆದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರೀ ಅಂತರ ದಿಂದ ಸೋಲನ್ನು ಕಂಡಿದ್ದ ಭಾರತೀಯ ವನಿತಾ ತಂಡವು ಶನಿವಾರ ನಡೆ ಯುವ ದ್ವಿತೀಯ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಜೀವಂತ ವಿರಿಸಿಕೊಳ್ಳಲು ಪ್ರಯತ್ನಿಸಲಿದೆ.

Advertisement

ಗುರುವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ವನಿತೆಯರು 8 ವಿಕೆಟಿಗೆ 282 ರನ್ನುಗಳ ದೊಡ್ಡ ಮೊತ್ತ ಪೇರಿಸಿದರೂ ಅದನ್ನು ಸಮರ್ಥಿಸಿಕೊಳ್ಳಲು ವಿಫ‌ಲವಾಗಿ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ಈ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್‌ 82 ಮತ್ತು ಪೂಜಾ ವಸ್ತ್ರಾಕರ್‌ ಅಜೇಯ 62 ರನ್‌ ಗಳಿಸಿ ತಂಡವನ್ನು ಆಧರಿಸಿದ್ದರು.

ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್‌ ಪರಿಣಾಮಕಾರಿಯಾಗಿಲ್ಲ. ಇದರ ಲಾಭವೆತ್ತಿದ ಆಸ್ಟ್ರೇಲಿಯ ವನಿತೆಯರು ಇನ್ನೂ ಮೂರು ಓವರ್‌ಗಳು ಇರುವತೆ ಕೇವಲ ನಾಲ್ಕು ವಿಕೆಟ್‌ ನಷ್ಟದಲ್ಲಿ ಜಯಭೇರಿ ಸಾಧಿಸಿದ್ದರು.

ಇದು ತವರಿನಲ್ಲಿ ಭಾರತದ ಸತತ ಎಂಟನೇ ಸೋಲು ಆಗಿದೆ. ಭಾರತ ಸೋತ ರೀತಿಯನ್ನು ಗಮನಿಸಿದರೆ ವನಿತೆ ಯರು ಫೀಲ್ಡಿಂಗ್‌, ಬೌಲಿಂಗ್‌ ವಿಷಯ ದಲ್ಲಿ ಇನ್ನಷ್ಟು ಸುಧಾರಣೆ ತರಬೇಕಾದ ಅಗತ್ಯವಿದೆ ಎಂಬುದು ಖಚಿತವಾಗಿದೆ. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ದಾಖಲಿಸಿರುವ ಆಸ್ಟ್ರೇಲಿಯ ತಂಡ ದ್ವಿತೀಯ ಪಂದ್ಯದಲ್ಲೂ ಗೆಲುವು ಸಾಧಿಸಿದರೆ ಸರಣಿ ತನ್ನದಾಗಿಸಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next