Advertisement
ಅತ್ಯಧಿಕ ರನ್ :
Related Articles
Advertisement
2ನೇ ಇನ್ನಿಂಗ್ಸ್‌ನ ದಾಖಲೆ ವೀರ :
ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿಯುವುದು ತುಸು ಕಷ್ಟವೇ ಆಗಬಹುದು. ಏಕೆಂದರೆ ಸದ್ಯ ಟಿ20ಯಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅಂದರೆ 1,983 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧಶತಕಗಳು ಸೇರಿವೆ. ಅಷ್ಟೇ ಅಲ್ಲ, ಎರಡನೇ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು 50 ರನ್ ಬಾರಿಸಿದ ದಾಖಲೆಯೂ ಇವರ ಮುಡಿಗೇ ಸಲ್ಲುತ್ತದೆ. ಇದರ ಜತೆಗೆ 2ನೇ ಇನ್ನಿಂಗ್ಸ್ ಆಡಿ ತಂಡಕ್ಕೆ ಅತ್ಯುತ್ತಮ ಗೆಲುವಿನ ಕೊಡುಗೆ ನೀಡಿದ ದಾಖಲೆಯೂ ಕೊಹ್ಲಿ ಹೆಸರಲ್ಲಿದೆ. ಚೇಸಿಂಗ್ ಮಾಡಿ ಗೆದ್ದ ವೇಳೆ ಕೊಹ್ಲಿ ಗಳಿಸಿರುವ ಒಟ್ಟಾರೆ ರನ್ 1621. ಅಲ್ಲದೆ ಇದರಲ್ಲಿ ಹದಿನಾರು ಫಿಫ್ಟಿಗಳಿವೆ. ಕ್ರಿಕೆಟ್ ಇತಿಹಾಸದಲ್ಲಿ ಚೇಸಿಂಗ್ ಮಾಡಿ, ಗೆದ್ದ ತಂಡದಲ್ಲಿ ಹೆಚ್ಚು ಅರ್ಧಶತಕ ಗಳಿಸಿದ ಕೀರ್ತಿಯೂ ಕೊಹ್ಲಿಗೇ ಸಲ್ಲುತ್ತದೆ.
2,036 ರನ್: ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ ಮೂರನೇ ಕ್ರಮಾಂಕ ದಲ್ಲಿ ಬಂದು ಅತೀ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್. ಈ ಸರದಿಯಲ್ಲಿ ಅವರು 2,036 ರನ್ ಗಳಿಸಿದ್ದಾರೆ. ಪಾಕ್ ಮೇಲೆ ಅಜೇಯ 82 ಮತ್ತು ನೆದರ್ಲೆಂಡ್ ವಿರುದ್ಧ ಅಜೇಯ 62 ರನ್ ಗಳಿಸಿದ ಅನಂತರ ಅವರ ರನ್ 2,036ಕ್ಕೆ ಏರಿಕೆಯಾಗಿದೆ. ಮೂರನೇ ಕ್ರಮಾಂಕದಲ್ಲಿ 2,000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. ಹಾಗೆಯೇ ನಂಬರ್ 3ನಲ್ಲಿ ವಿರಾಟ್ ಕೊಹ್ಲಿ 30ನೇ ಅರ್ಧಶತಕ ಬಾರಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ಕೀರ್ತಿಯೂ ಇವರೇ ಸಲ್ಲುತ್ತದೆ.
ಪಾಕಿಸ್ಥಾನ ವಿರುದ್ಧ 308 :
ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ಥಾನ ವಿರುದ್ಧ 300ಕ್ಕೂ ಅಧಿಕ ರನ್ ಬಾರಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್. ಪಾಕ್ ವಿರುದ್ಧದ ಕಳೆದ ಪಂದ್ಯದಲ್ಲಿ 82 ರನ್ ಗಳಿಸಿದ ಬಳಿಕ ಒಟ್ಟಾರೆ ರನ್ 308ಕ್ಕೆ ಏರಿಕೆಯಾಗಿದೆ. ಹಾಗೆಯೇ ವಿರುದ್ಧದ ತಂಡವೊಂದರ ವಿರುದ್ಧ 300ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಕೂಡ ವಿರಾಟ್ ಕೊಹ್ಲಿ. ಇದಕ್ಕಿಂತ ಪ್ರಮುಖವಾಗಿ ಪಾಕಿಸ್ಥಾನ ವಿರುದ್ಧ ಟಿ20 ವಿಶ್ವಕಪ್ ಪಂದ್ಯಗಳಲ್ಲಿ 4 ಅರ್ಧಶತಕ ಬಾರಿಸಿದ ಏಕೈಕ ಕ್ರಿಕೆಟರ್ ಕೂಡ ಕೊಹ್ಲಿ ಅವರೇ. ಅವರು 2012ರಲ್ಲಿ 78, 2016ರಲ್ಲಿ 55, 2021ರಲ್ಲಿ 57 ಮತ್ತು 2022ರ ವಿಶ್ವಕಪ್‌ನಲ್ಲಿ 82 ರನ್ ಗಳಿಸಿದ್ದಾರೆ. ವಿಶೇಷ ಎಂದರೆ 2021ರ ಅರ್ಧಶತಕ ಹೊರತು ಪಡಿಸಿ ಉಳಿದೆಲ್ಲವೂ ಅಜೇಯ ಅರ್ಧಶತಕಗಳೇ!
57ನೇ ಬಾರಿ :
3ನೇ ಕ್ರಮಾಂಕದಲ್ಲಿ ಬಂದು ಅರ್ಧ ಶತಕ ಗಳಿಸಿದ 57ನೇ ಬ್ಯಾಟ್ಸ್ ಮನ್ ಕೊಹ್ಲಿ. ಭಾರತದ ಮಟ್ಟಿಗೆ ಹೇಳುವು ದಾದರೆ ಇದು 14ನೇ ಬಾರಿ 3ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಅರೆಶತಕ ಗಳಿಸಿದ್ದು.
ಏಕೈಕ ಆಟಗಾರ :
ಟಿ20 ವಿಶ್ವಕಪ್‌ನ ಪಂದ್ಯವೊಂದರ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 80 ಪ್ಲಸ್ ರನ್ ಬಾರಿಸಿದ ಭಾರತದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. 2016ರ ಮಾರ್ಚ್ 27ರಂದು ಆಸ್ಟ್ರೇಲಿಯ ವಿರುದ್ಧ ಅಜೇಯ 82 ರನ್ ಬಾರಿಸಿದ್ದರು. ಈ ಪಂದ್ಯ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿತ್ತು. ಈಗ ಆಸ್ಟ್ರೇಲಿಯದ ಮೆಲ್ಬರ್ನ್ ನಲ್ಲಿ ಪಾಕಿಸ್ಥಾನದ ವಿರುದ್ಧ ಅಜೇಯ 82 ರನ್ ಬಾರಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ 989 :
ಟಿ20 ವಿಶ್ವಕಪ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರ ಒಟ್ಟಾರೆ ರನ್ 989. ಹಾಗೆಯೇ 900ಕ್ಕೂ ಅಧಿಕ ರನ್ ಗಳಿಸಿದ ಜಗತ್ತಿನ ಎರಡನೇ ಬ್ಯಾಟ್ಸ್‌ಮನ್. ಮೊದಲ ಸ್ಥಾನದಲ್ಲಿ ಜಯವರ್ಧನೆ 1,016, ಎರಡನೇ ಸ್ಥಾನದಲ್ಲಿ ಕೊಹ್ಲಿ, ಮೂರನೇ ಸ್ಥಾನದಲ್ಲಿ ಕ್ರಿಸ್ ಗೇಲ್ 965 ರನ್ ಗಳಿಸಿದ್ದಾರೆ. ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಒಟ್ಟಾರೆಯಾಗಿ 12 ಅರ್ಧಶತಕ ಗಳಿಸಿದ್ದಾರೆ. ಜತೆಗೆ ಟಿ20 ವಿಶ್ವಕಪ್‌ನಲ್ಲಿ 10ಕ್ಕೂ ಹೆಚ್ಚು ಅರ್ಧಶತಕ ಬಾರಿಸಿದ ಜಗತ್ತಿನ ಏಕೈಕ ಬ್ಯಾಟ್ಸ್‌ಮನ್.
ರನ್ ವಿರುದ್ಧ ವರ್ಷ
50 ಅಫ್ಘಾನಿಸ್ಥಾನ 2012
78 ಪಾಕಿಸ್ಥಾನ 2012
54 ವೆಸ್ಟ್ ಇಂಡೀಸ್ 2014
57 ಬಾಂಗ್ಲಾದೇಶ 2014
72 ದಕ್ಷಿಣ ಆಫ್ರಿಕಾ 2014
77 ಶ್ರೀಲಂಕಾ 2014
55 ಪಾಕಿಸ್ಥಾನ 2016
82 ಆಸ್ಟ್ರೇಲಿಯ 2016
89 ವೆಸ್ಟ್ ಇಂಡೀಸ್ 2016
57 ಪಾಕಿಸ್ಥಾನ 2021
82 ಪಾಕಿಸ್ಥಾನ 2022
62 ನೆದರ್ಲೆಂಡ್ 2022
ಎಚ್.ಆರ್.ಗೋಪಾಲಕೃಷ್ಣ