Advertisement

ಶಟ್‌ಡೌನ್‌ಗೆ 2ನೇ ದಿನ 

06:55 AM Dec 24, 2018 | |

ವಾಷಿಂಗ್ಟನ್‌: ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಸ್ತಾಪವನ್ನು ವಿರೋಧಿಸಿ ಹಣಕಾಸು ಮಸೂದೆಗೆ ಡೆಮಾಕ್ರಾಟ್‌ ಪಕ್ಷ ಅನುಮತಿ ನೀಡದ ಕಾರಣ ಶನಿವಾರದಿಂದ ಅಮೆರಿಕ ಭಾಗಶಃ ಸ್ತಬ್ಧವಾಗಿದೆ. 

Advertisement

ಕ್ರಿಸ್‌ಮಸ್‌ ನಂತರವೇ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇರುವುದರಿಂದ ಇನ್ನೂ ಕೆಲವು ದಿನಗಳವರೆಗೆ ಈ ಸಮಸ್ಯೆ ಮುಂದುವರಿಯಲಿದೆ ಎನ್ನಲಾಗಿದೆ. ಬಹುತೇಕ ಸರ್ಕಾರಿ ಸಂಸ್ಥೆಗಳು ಕಾರ್ಯ ಸ್ಥಗಿತಗೊಳಿಸಿವೆ. ಶ್ವೇತಭವನದಲ್ಲೂ ಅಧಿಕಾರಿಗಳ ಸಂಖ್ಯೆ ಕಡಿಮೆ ಇರಲಿದೆ. ಸಾಮಾನ್ಯವಾಗಿ ಕ್ರಿಸ್‌ಮಸ್‌ಗೆ ಫ್ಲೋರಿಡಾಗೆ ತೆರಳುತ್ತಿದ್ದ ಟ್ರಂಪ್‌ ಈ ಬಾರಿ ವಾಷಿಂಗ್ಟನ್‌ನಲ್ಲೇ ಇರುವುದಾಗಿ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next