Advertisement

ಜಮ್ಮು-ಕಾಶ್ಮೀರದಲ್ಲಿ 2G ಇಂಟರ್ನೆಟ್ ಸೇವೆ ಪುನರಾರಂಭ: ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ

09:16 AM Jan 16, 2020 | Team Udayavani |

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಐದು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಬ್ರಾಡ್ ಬ್ಯಾಂಡ್ ಇಂಟರ್ ನೆಟ್  ಸೇವೆ ಪುನರಾರಂಭವಾಗಲಿದೆ. ಮೊದಲಿಗೆ 5 ಜಿಲ್ಲೆಗಳಲ್ಲಿ ಹಂತಹಂತವಾಗಿ ಈ 2G ಇಂಟರ್ನೆಟ್ ಸೇವೆ ಜಾರಿಗೆ ಬರಲಿದ್ದು ಅದಾಗ್ಯೂ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

Advertisement

ಅತ್ಯಗತ್ಯ ಸೇವೆಯನ್ನು ಒದಗಿಸುವ ಆಸ್ಪತ್ರೆಗಳು, ಬ್ಯಾಂಕ್ ಗಳು, ಸರ್ಕಾರಿ ವೆಬ್ ಸೈಟ್ ಗಳು,  ಇತ್ಯಾದಿ ಹಲವು ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ಒದಗಿಸಲಾಗುವುದು. ಆದರೇ ಇದರ ದುರುಪಯೋಗವನ್ನು ತಡೆಗಟ್ಟಲು ಆಯಾ ಸಂಸ್ಥೆಗಳೇ ಜವಾಬ್ದಾರರಾಗಿರುತ್ತವೆ. ಮತ್ತು ದಾಖಲೆ ಮತ್ತು ಬಳಕೆಯನ್ನು ಮೇಲ್ಚಿಚಾರಣೆ ಮಾಡಲು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ನೋಡಲ್  ಅಧಿಕಾರಿಗಳ ನೇಮಕ ಮಾಡಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಶ್ರೀನಗರ ಸೇರಿದಂತೆ ಮಧ್ಯ ಕಾಶ್ಮೀರದಲ್ಲಿ ಇಂದಿನ 2G ಮೊಬೈಲ್ ಸಂಪರ್ಕ ಆರಂಭವಾದರೆ ಎರಡು ದಿನಗಳ ನಂತರ ಕುಪ್ವಾರಾ, ಬಂಡಿಪೋರಾ, ಮತ್ತು ಬಾರಾಮುಲ್ಲಾ ದಲ್ಲಿ, ತದನಂತರ ಪುಲ್ವಾಮ, ಕುಲ್ಗಂ , ಅನಂತ್ ನಾಗ್ ನಲ್ಲಿ ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಂತರ್ಜಾಲ ಸೇವೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಇದೀಗ ಮರುಸ್ಥಾಪನೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next