Advertisement

2 ಜಿ ಹಗರಣ:6 ತಿಂಗಳೊಳಗೆ ತನಿಖೆ ಮುಗಿಸಿ;ಸುಪ್ರೀಂ ಚಾಟಿ 

03:05 PM Mar 12, 2018 | |

ಹೊಸದಿಲ್ಲಿ: 2ಜಿ ಸ್ಪೆಕ್ಟ್ರಂ ಹಂಚಿಕೆ ಮತ್ತು ಸಂಬಂಧ ಪಟ್ಟ ಹಗರಣಗಳ ತನಿಖೆಯನ್ನು 6 ತಿಂಗಳೊಳಗೆ ಮುಗಿಸುವಂತೆ ಸುಪ್ರೀಂ ಕೋರ್ಟ್‌ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಸೋಮವಾರ ನಿರ್ದೇಶನ ನೀಡಿದೆ.

Advertisement

ನ್ಯಾಯಮೂರ್ತಿಗಳಾದ ಅರುಣ್‌ ಮಿಸ್ರಾ ಮತ್ತು ನವೀನ್‌ ಸಿನ್ಹಾ ಅವರ ದ್ವಿಸದಸ್ಯ ಪೀಠ  2ಜಿ ಹಗರಣ ಮತ್ತು ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣದ  ತನಿಖೆಯ ಕುರಿತಾಗಿ ಸ್ಥಿತಿ ವರದಿಯನ್ನು 2 ವಾರಗಳ ಒಳಗೆ ಸಲ್ಲಿಸಲು ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ. 

‘ಬಹಳ ಸಮಯದಿಂದ ತನಿಖೆ ನಡೆಯುತ್ತಿದ್ದು, ದೇಶದ ಜನತೆಯನ್ನು ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಕತ್ತಲೆಯಲ್ಲಿ ಇಡುವುದು ಸರಿಯಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. 

ಹಗರಣಕ್ಕೆ ಸಂಬಂಧಿಸಿ 2014 ರಲ್ಲಿ ನೇಮಿಸಲಾಗಿದ್ದ  ವಿಶೇಷ ಸಾರ್ವಜನಿಕ ಅಭಿಯೋಜಕರಾದ ಆನಂದ್‌ ಗ್ರೋವರ್‌ ಅವರನ್ನು  ನ್ಯಾಯಪೀಠ  ಮುಕ್ತಗೊಳಿಸಿ  , ಆ ಜಾಗಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ನೇಮಕ ಮಾಡಲು ಅನುಮೋದನೆಯ ಮುದ್ರೆ ಒತ್ತಿತು. 

2 ಜಿ ಹಗರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕರಾದ ಎ. ರಾಜಾ ಮತ್ತು ಕನ್ನಿಮೋಳಿ ಸಹಿತ 19 ಆರೋಪಿ ಗಳನ್ನು ನಿರಪರಾಧಿ ಎಂದು ಸಿಬಿಐ ವಿಶೇಷ ಕೋರ್ಟ್‌ ಘೋಷಿಸಿ,ಇದೊಂದು ಹಗರಣವೇ ಅಲ್ಲ ಎಂದು ತೀರ್ಪು ನೀಡಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next