Advertisement

ಕರೆಂಟ್‌, ನೀರು ಇಲ್ಲದ ಮನೆಗೆ 5.5 ಕೋಟಿ ರೂ!

08:11 PM Sep 05, 2021 | Team Udayavani |

ಲಂಡನ್‌: ಆ ಮನೆಗೆ ಕರೆಂಟ್‌ ಇಲ್ಲ, ಶುದ್ಧ ನೀರಿನ ಪೂರೈಕೆಯೂ ಇಲ್ಲ, ಈಗಿನ ಅಗತ್ಯತೆಯಾದ ಇಂಟರ್‌ನೆಟ್‌ ಕೂಡ ಇಲ್ಲ. ಆದರೂ ಮನೆಯ ಬೆಲೆ 5.5 ಕೋಟಿ ರೂಪಾಯಿ!

Advertisement

ಯುಕೆಯ ಡೆವಾನ್‌ ಪ್ರದೇಶದ ಆಫ್ ಗ್ರಿಡ್‌ ಮನೆ ಮಾರಾಟಕ್ಕಿದೆ.

ವಿಶೇಷತೆಯೆಂದರೆ, ಈ ಮನೆಯಲ್ಲಿರುವವರು ಬಾಗಿಲು ತೆರೆದರೆ ಕಾಣುವುದು ವಿಶಾಲ ಸಮುದ್ರದ ಅದಮ್ಯ ಸೌಂದರ್ಯ.

ಸಮುದ್ರದೊಳಗಿನ ದ್ವೀಪದಂತಿರುವ ಪ್ರದೇಶದಲ್ಲಿ ಇರುವ ಒಂಟಿ ಮನೆಯದು.

3 ರೂಂಗಳು, 1 ಕಿಚನ್‌, 1 ಹಾಲ್‌, 1 ಶವರ್‌ ರೂಂ ಇರುವ ಮನೆಯಲ್ಲಿ ಶಾಂತಿಯಿಂದ ವಾಸಿಸಲು ಬಯಸುವವರು ನೆಮ್ಮದಿಯಾಗಿ ಬದುಕುಬಹುದು ಎನ್ನುತ್ತಾನೆ ಅದರ ಮಾಲೀಕ ಮಿಚೆಲ್‌ ಸ್ಟೀವನ್ಸ್‌.

Advertisement

ಇದನ್ನೂ ಓದಿ:ಭಾರಿ ಮಳೆಯಾಗುವ ಸಾಧ್ಯತೆ: ಗೋವಾದಲ್ಲಿ ಆರೆಂಜ್ ಅಲರ್ಟ್ ಘೋಷಣೆ

 

Advertisement

Udayavani is now on Telegram. Click here to join our channel and stay updated with the latest news.

Next