Advertisement

2ಎ ಮೀಸಲಾತಿ ಸಂಬಂಧ ಸರ್ಕಾರದಿಂದ ಸಂದೇಶ ನಿರೀಕ್ಷೆ

04:52 PM Sep 29, 2021 | Team Udayavani |

ಚಿತ್ರದುರ್ಗ: ಪಂಚಮಸಾಲಿಸಮುದಾಯಕ್ಕೆ 2ಎ ಮೀಸಲಾತಿನೀಡುವ ಸಂಬಂಧ ರಾಜ್ಯ ಸರ್ಕಾರದಾವಣಗೆರೆಯಲ್ಲಿ ಸೆ. 30 ರಂದುನಡೆಯುವ ಸಮಾವೇಶಕ್ಕೆ ಸಂದೇಶ ಕಳುಹಿಸುವ ನಿರೀಕ್ಷೆ ಇದೆ ಎಂದು ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ನಗರದ ಗಾಯತ್ರಿಕಲ್ಯಾಣಮಂಟಪದಲ್ಲಿ ಮಂಗಳವಾರಅಖೀಲ ಭಾರತ ಲಿಂಗಾಯತಪಂಚಮಸಾಲಿ ಸಮಾಜದಿಂದಹಮ್ಮಿಕೊಂಡಿದ್ದ “ಪಂಚಮಸಾಲಿ ಪ್ರತಿಜ್ಞಾಪಂಚಾಯತ್‌’ ಉದ್ಘಾಟಿಸಿ ಶ್ರೀಗಳುಮಾತನಾಡಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ.

ಮೀಸಲಾತಿ ಸೌಲಭ್ಯಕಲ್ಪಿಸಿದರೆ ಅವರ ಭಾವಚಿತ್ರವನ್ನುಮಠದಲ್ಲಿ ಹಾಕಿಕೊಳ್ಳುತ್ತೇವೆ ಹಾಗೂಅವರಿಗೆ ಕಲ್ಲುಸಕ್ಕರೆಯ ತುಲಾಭಾರಮಾಡುತ್ತೇವೆ. ಇಲ್ಲವಾದರೆ ಮಾರ್ಚ್‌15ಕ್ಕೆ ನಿಲ್ಲಿಸಿದ್ದ ಹೋರಾಟವನ್ನು ಮತ್ತೆಕೈಗೆತ್ತಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಲಿಂಗಾಯತ ಸಮುದಾಯದಲ್ಲಿಪಂಚಮಸಾಲಿ ಒಳಪಂಗಡದವರೇಶೇ. 50ರಷ್ಟು ಇದ್ದಾರೆ. ಬೆಂಗಳೂರಿನಲ್ಲಿಹತ್ತು ಲಕ್ಷ ಜನರನ್ನು ಸೇರಿಸಿ ಸಮಾವೇಶಮಾಡಿದ ಮತ್ತೂಂದು ಒಳಪಂಗಡಸಿಗಲು ಸಾಧ್ಯವಿಲ್ಲ. ನಮಗೆ ಸರ್ಕಾರನೀಡಿದ್ದ ಗಡುವು ಸೆ.15ಕ್ಕೆ ಮುಗಿದಿದೆ.

ಹಿಂದುಳಿದ ವರ್ಗಗಳ ಆಯೋಗದ ವರದಿತರಿಸಿಕೊಂಡು ಸರ್ಕಾರ ಮೀಸಲಾತಿನೀಡಬೇಕು ಎಂದು ಆಗ್ರಹಿಸಿದರು.

Advertisement

ಅಖೀಲ ಭಾರತೀಯ ಪಂಚಮಸಾಲಿಮಹಾಸಭಾ ಅಧ್ಯಕ್ಷ ವಿಜಯಾನಂದಕಾಶಪ್ಪನವರ್‌ ಮಾತನಾಡಿ, ಈ ಹಿಂದೆಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಕೊಟ್ಟ ಮಾತುಪಾಲನೆ ಮಾಡಲಿಲ್ಲ. ಈಗ ಬಸವರಾಜಬೊಮ್ಮಾಯಿ ಅವರ ಮೇಲೆ ವಿಶ್ವಾಸವಿದೆ.ಅವರ ಕ್ಷೇತ್ರದಲ್ಲಿಯೂ ಪಂಚಮಸಾಲಿಸಮುದಾಯದ ಮತದಾರರಿದ್ದಾರೆ.ಈಗಲಾದರೂ ಸರ್ಕಾರದನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

2ಎ ಮೀಸಲಾತಿಗಾಗಿ ಇತಿಹಾಸದಲ್ಲಿಎಂದೂ ಆಗದಂತಹ ಹೋರಾಟನಡೆದಿದೆ. 39 ದಿನ ಪಾದಯಾತ್ರೆ ಹಾಗೂ23 ದಿನ ಧರಣಿ ನಡೆಸಿ ಸರ್ಕಾರದ ಮೇಲೆಒತ್ತಡ ತರಲಾಗಿದೆ. ಲಿಂಗಾಯತದ ಇತರಪಂಗಡಗಳಿಗೆ ಮೀಸಲಾತಿ ನೀಡಿ ನಮಗೆವಂಚನೆಯಾಗಿರುವ ಬಗ್ಗೆ ಸರ್ಕಾರದಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.

ಮೀಸಲಾತಿ ಹೋರಾಟ ಸಮಿತಿಜಿಲ್ಲಾ ಉಸ್ತುವಾರಿ ಎಸ್‌.ಎಂ.ಎಲ್‌ತಿಪ್ಪೇಸ್ವಾಮಿ ಮಾತನಾಡಿ, ಸಮಾಜದಉದ್ಧಾರಕ್ಕಾಗಿ, ಬಡ ಮಕ್ಕಳ ಶಿಕ್ಷಣಕ್ಕಾಗಿಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ.ನಾವೆಲ್ಲರೂ ಅವರಿಗೆ ಬೆಂಬಲನೀಡಬೇಕು. ಶಾಸಕರಾದ ಬಸನಗೌಡಪಾಟೀಲ ಯತ್ನಾಳ ಮತ್ತು ಅರವಿಂದಬೆಲ್ಲದ್‌ ಅವರು ಅಧಿ ವೇಶನದಲ್ಲಿ ಧರಣಿನಡೆಸಿದ್ದಾರೆ. ಆದರೆ ಮಂತ್ರಿಯಾಗಲು ಸಮುದಾಯವನ್ನು ಏಣಿಯಾಗಿ ಬಳಸಿಕೊಂಡ ಮುರುಗೇಶ ನಿರಾಣಿ ದಿಕ್ಕುತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪಂಚಸೇನೆ ಅಧ್ಯಕ್ಷ ಡಾ| ಟಿ.ಎಸ್‌.ಪಾಟೀಲ, ವೀರಶೈವ ಮಹಾಸಭಾಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಜಿಪಂಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌,ಮುಖಂಡರಾದ ಶಂಭುಲಿಂಗೇಗೌಡಪಾಟೀಲ್‌, ಪಂಚಮಸಾಲಿ ಸಮಾಜದಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿದೇವೇಂದ್ರಪ್ಪ, ಕಾರ್ಯದರ್ಶಿ ರೀನಾವೀರಭದ್ರಪ್ಪ, ಮುಖಂಡರಾದಜಿತೇಂದ್ರ ಎನ್‌. ಹುಲಿಕುಂಟೆ, ವೀರಶೈವಯುವ ವೇದಿಕೆ ಜಿಲ್ಲಾಧ್ಯಕ್ಷ ಎಚ್‌.ಎಂ.ಮಂಜುನಾಥ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next