Advertisement

ಸಂಭ್ರಮದ 29ನೇ ಸಾಮೂಹಿಕ ಶ್ರೀ ಶನೀಶ್ವರ ಮಹಾಪೂಜೆ

07:32 PM Jan 05, 2021 | Team Udayavani |

ಡೊಂಬಿವಲಿ, ಜ. 4: ಡೊಂಬಿವಲಿ ತುಳು ಕನ್ನಡಿಗರ ಪ್ರತಿಷ್ಠಿತ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆ ಗಳಲ್ಲಿ ಒಂದಾದ ಡೊಂಬಿವಲಿ ಪಶ್ಚಿಮ ವಿಭಾಗದ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವತಿಯಿಂದ ಜ. 2ರಂದು ಡೊಂಬಿವಲಿ ಪಶ್ಚಿಮದ ಶ್ರೀ ದುರ್ಗಾ ಪರ ಮೇಶ್ವರಿ ಮಂದಿರದಲ್ಲಿ 29ನೇ ಸಾಮೂಹಿಕ ಶ್ರೀಶನೀಶ್ವರ ಮಹಾ ಪೂಜೆ ಹಾಗು ಶ್ರೀ ಸತ್ಯನಾರಾಯಣಮಹಾ ಪೂಜೆ ಯನ್ನು ಅತ್ಯಂತ ಭಕ್ತಿ ಭಾವದಿಂದ ಆಚರಿಸಲಾಯಿತು.

Advertisement

ವೇ| ಮೂ| ಪಂಡಿತ್‌ ಶುಭಕರ ಭಟ್ಟ ಅವರ ಸಾರಥ್ಯದಲ್ಲಿ ಬೆಳಗ್ಗೆ ಸದ್ಭಕ್ತರಾದ ಗೋಪಾಲ್‌ ಕೆ. ಶೆಟ್ಟಿ,ಪ್ರಭಾಕರ ಶೆಟ್ಟಿ ಹಾಗೂ ಸುರೇಶ್‌ ಶೆಟ್ಟಿ ದಂಪತಿಗಳುಶ್ರೀ ಸತ್ಯನಾರಾಯಣ ಪೂಜೆಯ ಯಜಮಾನಿಕೆ ಯನ್ನು ವಹಿಸುವುದರ ಮೂಲಕ ಕಾರ್ಯಕ್ರಮಪ್ರಾರಂಭ ವಾಯಿತು. ದಿ| ನಾರಾಯಣ ಸಾಲ್ಯಾನ್‌ಅವರ ಶಿಷ್ಯ ಕೇಶವ ಸುವರ್ಣ ಅವರು ಶ್ರೀ ಶನೀಶ್ವರದೇವರ ಕಲಶ ಪ್ರತೀಷ್ಠಾಪನೆ ಹಾಗೂ ಪಾರಾಯಣ ವನ್ನು ನಡೆಸಿಕೂಟ್ಟರು. ಮಂಡಳಿಯ ಸದಸ್ಯರು ಅಪ್ರತಿಮವಾದ ಭಜನೆಗಳನ್ನು ಪ್ರಸ್ತುತ ಪಡಿಸಿ ನೆರೆದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದರು.

ಸದ್ಭಕ್ತರನ್ನು ಉದ್ದೇಸಿಸಿ ಮಾತನಾಡಿದ ಮಂಡಳದ ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ ಅವರು, ಶ್ರೀಶನಿದೇವರಿಗೆ ಭಕ್ತಿಭಾವದಿಂದ ಪೂಜಿಸಿದರೆ ನಮ್ಮಸಕಲ ದುಃಖಗಳು ಪರಿಹಾರವಾಗುವುದು. ನಾವು ಯಾವಾಗಲೂ ಅಹಂಕಾರ ಪಡದೆ, ನಾನು ನನ್ನದೆಂಬ ಮಮಕಾ ರವನ್ನು ಬಿಟ್ಟು ನಮ್ಮ ಧರ್ಮ, ಸಂಸ್ಕೃತಿಗೆ ಅನುಗುಣ ವಾಗಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯುಸಮಾಧಾನ ದಿಂದ ಬದುಕಿ ಸಾರ್ಥಕ ಜೀವನ ಸಾಗಿಸಬೇಕು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನುಆಚರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದನಮ್ಮ ಮಂಡಳವು ಸಾಮೂಹಿಕ ಧಾರ್ಮಿಕಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇದಕ್ಕೆ ಸದ್ಭಕ್ತರ ಅಮೂಲ್ಯ ಸಹಕಾರವೇ ಕಾರಣ. ತಮ್ಮಸಹಾಯ ಸಹಕಾರ ಇದೆ ರೀತಿ ಮುಂದುವರೆಯಲಿ, ತಾಯಿ ದುರ್ಗಾ ಪರಮೇಶ್ವರಿ ತಮ್ಮ ಎಲ್ಲಮನೋಕಾಮನೆಗಳನ್ನು ಈಡೇರಿಸಲಿ ಎಂದು ಹಾರೈಸಿ ಶುಭಕೋರಿದರು.

ಮಹಾಮಂಗಳಾರತಿಯ ಅನಂತರ ನೂರಾರು ಭಕ್ತರು ಮಹಾಪ್ರಸಾದವನ್ನು ಸ್ವಿಕರಿಸಿ ಪುನೀತರಾದರು. ಮಂಡಳದ ಅಧ್ಯಕ್ಷ ಗೋಪಾಲ ಕೆ ಶೆಟ್ಟಿ, ಧರ್ಮ ದರ್ಶಿ ಅಶೋಕ್‌ ದಾಸು ಶೆಟ್ಟಿ, ಶ್ರೀ ಶನೀಶ್ವರ ಪೂಜಾಸಮೀತಿಯ ಅಧ್ಯಕ್ಷ ನಿತ್ಯಾನಂದ ಜತ್ತನ್‌, ಕಾರ್ಯ ದರ್ಶಿ ಸುನೀಲ್‌ ಸಂಜೀವ ಶೆಟ್ಟಿ, ಕೋಶಾಧಿ ಕಾರಿಜಯಪ್ರಸನ್ನ ಶೆಟ್ಟಿ, ಉಪಾಧ್ಯಕ್ಷರಾದ ಬ್ರಹ್ಮಾನಂದಶೆಟ್ಟಿಗಾರ್‌, ಜತೆ ಕಾರ್ಯದಶಿ ನಾರಾಯಣ ಮೆಂಡನ್‌, ಜತೆ ಕೋಶಾಧಿಕಾರಿ ನಾರಾಯಣ ಭಂಡಾರಿ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ,ಯುವ ವಿಭಾಗ ಹಾಗೂ ಮಂಡಳಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅತ್ಯಂತ ಶಿಸ್ತು ಬದ್ಧವಾಗಿ ಉತ್ಸವ ಜರಗಿತು.

 

Advertisement

ಚಿತ್ರ, ವರದಿ: ಗುರುರಾಜ್‌ ಪೋತನೀಸ್‌

 

Advertisement

Udayavani is now on Telegram. Click here to join our channel and stay updated with the latest news.

Next