Advertisement

296 ಜನ ಗುಣಮುಖ: 171 ಜನರಿಗೆ ಸೋಂಕು ದೃಢ

02:48 PM Aug 15, 2020 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ 296 ಜನ ಕೋವಿಡ್‌ನಿಂದ ಗುಣಮುಖರಾಗಿದ್ದು, ಶುಕ್ರವಾರ ಹೊಸದಾಗಿ 171 ಕೊ ಕೋವಿಡ್‌ ಸೋಂಕು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 3826 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 2803 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನ 40, ಬಾದಾಮಿ 17, ಹುನಗುಂದ 31, ಬೀಳಗಿ 6, ಮುಧೋಳ 68, ಜಮಖಂಡಿ 9 ಜನ ಇದ್ದು, ಅವರನ್ನು ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಿಂದ ಕಳುಹಿಸಿದ 1318 ಸ್ಯಾಂಪಲ್‌ಗ‌ಳ ವರದಿ ಬರಬೇಕಿದೆ. ಪ್ರತ್ಯೇಕವಾಗಿ 596 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 41,803 ಸ್ಯಾಂಪಲ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 36,372 ನೆಗೆಟಿವ್‌ ಬಂದಿವೆ. 3826 ಪಾಸಿಟಿವ್‌ ಬಂದಿದ್ದು, 969 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕಂಟೇನ್ಮೆಂಟ್‌ ಝೋನ್‌ 223 ಇದ್ದು, ಇನ್‌ಸ್ಟಿಟ್ಯೂಶನ್‌ ಕ್ವಾರಂಟೈನ್‌ನಲ್ಲಿದ್ದ 8207 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸೈದಾಪುರ-ಸಮೀರವಾಡಿಯಲ್ಲಿ 15 ಜನರಿಗೆ ಸೋಂಕು  : ಸೈದಾಪುರ-ಸಮೀರವಾಡಿಯಲ್ಲಿ ಶುಕ್ರವಾರ ಮತ್ತೆ 15 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಸೈದಾಪುರ ಗ್ರಾಪಂ ಪಿಡಿಒ ಮತ್ತು ಮಗ ಸೇರಿದಂತೆ 15 ಜನರಿಗೆ ಕೋವಿಡ್‌ ಸೊಂಕು ತಗುಲಿದೆ. ಸೋಂಕಿತರನ್ನು ರಬಕವಿ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.ಇದರೊಂದಿಗೆ ಕೋವಿಡ್‌ ಸೊಂಕಿತರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಗ್ರಾಪಂ ಅಧಿಕಾರಿಗಳು ಮತ್ತು ಗ್ರಾಮಲೆಕ್ಕಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್‌ ಸಿಬ್ಬಂದಿ ಸೋಂಕಿತರ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿ, ಸ್ಯಾನಿಟೈಸರ್‌ ಮಾಡಿದ್ದಾರೆ. ಪಟ್ಟಣದಲ್ಲಿ ಮತ್ತೆ ಎರಡು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಪಟ್ಟಣದ ಬ್ಯಾಳಿ ಓಣಿಯ 68 ವರ್ಷದ ಅಜ್ಜಿಗೆ, ಸಾಧುನಗುಡಿ ಓಣಿಯ 21 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. 8 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಪುರಸಭೆ ಅಧಿಕಾರಿಗಳು ಸೋಂಕಿತರ ಮನೆಯ ಏರಿಯಾ ಸೀಲ್‌ಡೌನ್‌ ಮಾಡಿ, ಮನೆಯ ಸದಸ್ಯರನ್ನು ಕ್ವಾರಂಟೈನ್‌ ಮಾಡಿದ್ದಾರೆ.

ಕೆರೂರ: ಇಬ್ಬರಿಗೆ ಕೋವಿಡ್‌ಸೋಂಕು ದೃಢ : ಪಟ್ಟಣದಲ್ಲಿ ಎರಡು ಬಡಾವಣೆಗಳ ಇಬ್ಬರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಐಎಲ್‌ಐ ಸಮಸ್ಯೆ ಕಂಡು ಬಂದಿರುವ ಇಬ್ಬರನ್ನು ಬಾಗಲಕೋಟೆ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಗಿದೆ. ಇಲ್ಲಿನ ಚಿನಗುಂಡಿಫ್ಲಾಟ್‌ ಬಡಾವಣೆಯ 55 ವರ್ಷದ ವ್ಯಕ್ತಿ ಹಾಗೂ ಬಡಿಗೇರ ಓಣಿಯ 55 ವರ್ಷದ ವ್ಯಕ್ತಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಈವರೆಗೆ ಪಟ್ಟಣದಲ್ಲಿ ಒಟ್ಟು 38ಕ್ಕೂ ಹೆಚ್ಚು ಜನರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಬಹುತೇಕರು ಚಿಕಿತ್ಸೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 7 ಪ್ರಕರಣಗಳು ಸಕ್ರಿಯವಾಗಿವೆ.ಉಸಿರಾಟದ ತೀವ್ರ ಸಮಸ್ಯೆಯಿಂದ ವೃದ್ಧೆ, ಮೂವರು ಪುರುಷರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಕೋವಿಡ್‌ ಪರೀಕ್ಷೆ; ಲೆಕ್ಕ ಕೊಡಲು ಕಾಂಗ್ರೆಸ್‌ ಆಗ್ರಹ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ಪರೀಕ್ಷೆ ಮಾಡಿದ ಏಳು ದಿನದ ಬಳಿಕ ವರದಿ ಬರುತ್ತಿವೆ. ನೆಗೆಟಿವ್‌ ಬಂದವರ ಅಂತ್ಯಕ್ರಿಯೆಗೂ ಅವಕಾಶ ಸಿಗುತ್ತಿಲ್ಲ. ಇಲ್ಲಿಯವರೆಗೆ ಸೋಂಕಿತರಿಗೆ ಏನು ಚಿಕಿತ್ಸೆ ನೀಡಲಾಗಿದೆ, ಸರ್ಕಾರದಿಂದ ಎಷ್ಟು ಖರ್ಚು ಮಾಡಲಾಗಿದೆ. ಲೆಕ್ಕವಿಲ್ಲ. ಕೋವಿಡ್‌ ನಿಯಂತ್ರಣದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಎಷ್ಟು ರೋಗಿಗಳಿಗೆ, ಜಿಲ್ಲಾಡಳಿತ ಎಷ್ಟು ಖರ್ಚು ಮಾಡಿದೆ ಎಂಬ ಸಂಪೂರ್ಣ ವಿವರ ಜಿಲ್ಲೆಯ ಜನತೆಯ ಮುಂದಿಡಬೇಕು. -ಎಸ್‌.ಜಿ. ನಂಜಯ್ಯನಮಠ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next