Advertisement

Kannada; ಕರವೇ ನಾರಾಯಣ ಗೌಡ ಸಹಿತ 29 ಮಂದಿಗೆ ಜಾಮೀನು

11:48 PM Jan 06, 2024 | Team Udayavani |

ಬೆಂಗಳೂರು: ಕನ್ನಡ ನಾಮಫ‌ಲಕ ಅಳವಡಿಕೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾ ಧ್ಯಕ್ಷ ಟಿ.ಎ.ನಾರಾಯಣ ಗೌಡ ಸಹಿತ ಒಟ್ಟು 29 ಕರವೇ ಕಾರ್ಯಕರ್ತರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ. ಆದರೆ ಅವರು ಸೋಮವಾರದವರೆಗೆ ಜೈಲಿನಿಂದ ಬಿಡುಗಡೆಯಾಗುವುದಿಲ್ಲ.

Advertisement

ನಾರಾಯಣ ಗೌಡ ಪರ ವಕೀಲರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸರಕಾರಿ ಅಭಿಯೋಜಕರ ಅಭಿಪ್ರಾಯ ಕೇಳಿತ್ತು. ಅವರು ಜ.2ರಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದರು.

ನಾರಾಯಣ ಗೌಡರ ಹಳೆ ಕೇಸ್‌ ಕೆದಕುತ್ತಿರುವ ಪೊಲೀಸ್‌ ಇಲಾಖೆ ?
ನಾರಾಯಣ ಗೌಡರಿಗೆ ಜಾಮೀನು ಮಂಜೂರಾದರೂ ಮತ್ತೆ ಸಂಕಷ್ಟ ಎದುರಾಗುವ ಗುಸುಗುಸು ಕೇಳಿ ಬರುತ್ತಿವೆ. ಕುಮಾರಸ್ವಾಮಿ ಲೇ ಔಟ್‌ ಹಾಗೂ ಹಲಸೂರು ಗೇಟ್‌ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದೆ ಎನ್ನಲಾದ ಹಳೆ ಪ್ರಕರಣಗಳಲ್ಲಿ ವಾರಂಟ್‌ ಮೇಲೆ ಮತ್ತೆ ನಾರಾಯಣ ಗೌಡರನ್ನು ಪೊಲೀ ಸರು ವಶಕ್ಕೆ ಪಡೆಯಲು ಸದ್ದಿಲ್ಲದೇ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆದರೆ ಹಿರಿಯ ಪೊಲೀಸ್‌ ಅಧಿಕಾರಿಗಳು ಈ ವಿಚಾರವನ್ನು ದೃಢಪಡಿಸಿಲ್ಲ. ಮತ್ತೂಂದೆಡೆ ನಾರಾಯಣ ಗೌಡ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾ ಗಿದ್ದ ಹಳೆ ಪ್ರಕರಣಗಳನ್ನು ಕೆದಕಲು ಆರಂಭಿಸಲಾಗಿದೆ ಎಂಬ ಮಾತುಗಳೂ ಇಲಾಖೆಯೊಳಗೆ ಕೇಳಿ ಬಂದಿದೆ.

ವಾಣಿಜ್ಯ ಮಳಿಗೆಗಳಲ್ಲಿ ಶೇ.60 ರಷ್ಟು ಗಾತ್ರದ ಕನ್ನಡ ಅಕ್ಷರಗಳ ನಾಮಫ‌ಲಕ ಇರಬೇಕು ಎಂಬುದಾಗಿ ಕರವೇ ಕಾರ್ಯಕರ್ತರು ಹಲವು ಅಂಗಡಿ-ಮುಂಗಟ್ಟುಗಳ ನಾಮಫ‌ಲಕ ಕಿತ್ತೆಸೆದಿದ್ದರು. ಆ ವೇಳೆ ಮಾಲ್‌ಆಫ್ ಏಷಿಯಾವನ್ನೇ ಕರವೇ ಟಾರ್ಗೆಟ್‌ ಮಾಡಿರುವುದು ಚರ್ಚೆಗೆ ಗ್ರಾಸವಾಗಿ ಹಲವು ರೀತಿಯ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next