Advertisement

2.9 ಕೋಟಿ ಮೌಲ್ಯದ ವಿದೇಶಿ ನೋಟು ಪತ್ತೆ

06:14 AM Jan 14, 2019 | |

ಬೆಂಗಳೂರು: ಅಕ್ರಮವಾಗಿ 2.9 ಕೋಟಿ ರೂ. ಮೌಲ್ಯದ ವಿದೇಶಿ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೀಮಾ ಸುಂಕ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಇಂಡೋನೇಷ್ಯಾ ಪಾಸ್‌ಪೋರ್ಟ್‌ ಹೊಂದಿರುವ 56 ವರ್ಷದ ವ್ಯಕ್ತಿ, ಬ್ಯಾಂಕಾಕ್‌ಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಸೀಮಾ ಸುಂಕ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.

ಈ ವೇಳೆ ಈತನ ಬ್ಯಾಗ್‌ನಲ್ಲಿದ್ದ ಕಪ್ಪು ಬಣ್ಣದ ಕವರ್‌ನಲ್ಲಿ ಸುತ್ತಿಟ್ಟಿದ್ದ ಬಟ್ಟೆ ಬಿಚ್ಚಿ ನೋಡಿದಾಗ ಡಾಲರ್‌, ಪೌಂಡ್‌ ಸೇರಿ 14 ದೇಶದ 2.9 ಕೋಟಿ ರೂ. ಮೌಲ್ಯದ ವಿದೇಶಿ ನೋಟುಗಳು ಪತ್ತೆಯಾಗಿವೆ. ಆದರೆ, ಆರೋಪಿ ಯಾರಿಗೆ ಕೊಂಡೊಯ್ಯಲು ತಂದಿದ್ದ ಎಂಬುದು ಈವರೆಗೂ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಆರೋಪಿ ಬೆಂಗಳೂರಿಗೆ ಬಂದಿದ್ದು, ಸ್ಥಳೀಯ ವ್ಯಕ್ತಿಗಳಿಂದ ನೋಟುಗಳನ್ನು ಪಡೆದುಕೊಂಡಿರಬಹುದು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next