Advertisement
ಮಂಗಳೂರು ನಿವಾಸಿ 53 ವರ್ಷದ ಪುರುಷ ಜು. 15ರಂದು ಮಧುಮೇಹ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜು. 19ರಂದು ಮೃತಪಟ್ಟಿದ್ದು, ಅವರಿಗೂ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ. 2,028 ಮಂದಿ ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರತ್ಕಲ್: ಎಂಆರ್‌ಪಿಎಲ್ ಟೌನ್‌ಶಿಪ್‌ನಲ್ಲಿ ಐವರಿಗೆ ಸೋಂಕು ರವಿವಾರ ದೃಢಪಟ್ಟಿದೆ. ಇದರೊಂದಿಗೆ ಕುಳಾçಯಲ್ಲಿ ಮೂರು, ಕಾಟಿಪಳ್ಳ, ಇಡ್ಯಾ, ಪಣಂಬೂರಿನಲ್ಲಿ ತಲಾ ಇಬ್ಬರಿಗೆ, ಮುಂಚೂರು, ಚೊಕ್ಕಬೆಟ್ಟಿನಲ್ಲಿ ಓರ್ವರಿಗೆ ಸೋಂಕು ತಗಲಿದೆ. ಚರ್ಚ್ ಶ್ಮಶಾನದಲ್ಲಿ ಅಂತ್ಯಕ್ರಿಯೆ
ಮಂಗಳೂರು: ಸೋಂಕಿನಿಂದ ಶನಿವಾರ ದ.ಕ. ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಪೈಕಿ 67 ವರ್ಷದ ಕುಲಶೇಖರ ಚರ್ಚ್ ವ್ಯಾಪ್ತಿಯ ಪುರುಷನೂ ಇದ್ದು, ಅವರ ಮೃತದೇಹವನ್ನು ಕುಲಶೇಖರ ಚರ್ಚ್‌ನ ಶ್ಮಶಾನದಲ್ಲಿ ಕ್ರೈಸ್ತ ಧರ್ಮದ ವಿಧಿವಿಧಾನಗಳ ಪ್ರಕಾರ ನೆರವೇರಿಸಲಾಯಿತು. ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮಾರ್ಗ ದರ್ಶನದಲ್ಲಿ ಅಂತ್ಯಕ್ರಿಯೆ ನಡೆಯಿತು.
Related Articles
ಮೂಲ್ಕಿ: ಎರಡು ದಿನಗಳ ಹಿಂದೆ ಪಾಸಿಟಿವ್ ದಾಖಲಾದ ಬೇಕರಿ ಮಾಲಕರ ಹೆತ್ತವರು, ತೋಕೂರು ಬಳಿಯ 32 ವರ್ಷದ ಮಹಿಳೆ, ಮೂಲ್ಕಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 53 ವರ್ಷದ ಪುರುಷ ಸೇರಿ 4 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
Advertisement
ಎಸ್ಸೆಮ್ಮೆಸ್ ಮೂಲಕ ನೆಗೆಟಿವ್ ವರದಿಮಂಗಳೂರು: ಇನ್ನು ಮುಂದೆ ಕೊರೊನಾ ಸೋಂಕು ತಪಾಸಣೆಯಲ್ಲಿ ವರದಿ ನೆಗೆಟಿವ್ ಬಂದರೂ ಸಂಬಂಧಪಟ್ಟ ವ್ಯಕ್ತಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನೆಯಾಗಲಿದೆ.
ಎಲ್ಲ ಕೋವಿಡ್-19 ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳು ಕೊರೊನಾ ಸೋಂಕಿಲ್ಲದ (ನೆಗೆಟಿವ್) ವ್ಯಕ್ತಿಯ ಫಲಿತಾಂಶ ಬಂದ ಕೂಡಲೇ ಆ ವ್ಯಕ್ತಿಗೆ ಎಸ್‌ಎಂಎಸ್ ಮೂಲಕ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಮಾಹಿತಿ ರವಾನಿಸುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ. ಕನ್ನಡದಲ್ಲಿ ಎಸ್‌ಎಂಎಸ್‌ನಲ್ಲಿ ಎಸ್‌ಆರ್‌ಎಫ್ ಐಡಿ-ಎಕ್ಸ್‌ವೈ ಝಡ್, ಫಲಿತಾಂಶ: ಕೋವಿಡ್ -19 ಸೋಂಕಿಲ್ಲ (ನೆಗೆಟಿವ್). ಜ್ವರ, ಉಸಿರಾಟ ತೊಂದರೆ/ಲಕ್ಷಣ ಕಂಡುಬಂದಲ್ಲಿ 14410 ಅಥವಾ 104ಗೆ ಕರೆ ಮಾಡಿ ಎಂಬ ಸಂದೇಶ ರವಾನೆಯಾಗುತ್ತವೆ. ಕ್ವಾರಂಟೈನ್ ನಿಯಮ ಉಲ್ಲಂಘನೆ: ದೂರು
ಸುಳ್ಯ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ದುರಸ್ತಿಗೆಂದು ಬಂದ ವ್ಯಕ್ತಿಗಳು ಕ್ವಾರಂಟೈನ್ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದ್ದು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು. 15ರಂದು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ದುರಸ್ತಿಗೆಂದು ತಮಿಳುನಾಡಿನಿಂದ ಬಂದಿದ್ದ ವಾನನ್ಸ್, ದೇವರಾಮನ, ಪ್ರೇಮಕುಮಾರ್ ಜಿ. ಹಾಗೂ ಗಾಂಧಿನಗರ ನಿವಾಸಿ ಪ್ರವೀಣ್ ಜಾರ್ಜ್, ಬೆಳ್ಳಾರೆ ನಿವಾಸಿ ಶ್ರುತಿ ಸಿ.ಎಸ್. ಅವರನ್ನು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಮಿತ್ತ ಕ್ವಾರಂಟೈನ್‌ಗೆ ಒಳಗಾಗಲು ಆದೇಶಿಸಲಾಗಿತ್ತು. ಆದರೆ ಅವರು ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಯಂತ್ರ ದುರಸ್ತಿಗೆ ಹೋಗಿದ್ದಾರೆ ಎಂದು ಸುಳ್ಯ ತಹಶೀಲ್ದಾರರು ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.