Advertisement

ಕೋವಿಡ್: ರಾಜ್ಯದಲ್ಲಿಂದು 5,631 ಸೋಂಕಿತರು ಗುಣಮುಖ; 2,848 ಹೊಸ ಪ್ರಕರಣ ಪತ್ತೆ

08:31 PM Jul 05, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು 2,848 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 67 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 35,434ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

Advertisement

ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 5,631 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 27,79,038ಕ್ಕೆ ಏರಿಕೆಯಾಗಿದೆ.

ರಾಜ್ಯಾದ್ಯಂತ ಇಂದು 1,46,575 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 2,848 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.94ಕ್ಕೆ ಇಳಿದಿದೆ.

ಜಿಲ್ಲಾವಾರು ಪ್ರಕರಣಗಳು :

ಬಾಗಲಕೋಟೆ-2, ಬಳ್ಳಾರಿ-15, ಬೆಳಗಾವಿ-95, ಬೆಂಗಳೂರು ಗ್ರಾಮಾಂತರ-57,  ಬೆಂಗಳೂರು ನಗರ-520, ಬೀದರ್-06, ಚಾಮರಾಜನಗರ-49, ಚಿಕ್ಕಬಳ್ಳಾಪುರ-11, ಚಿಕ್ಕಮಗಳೂರು-196, ಚಿತ್ರದುರ್ಗ-60, ದಕ್ಷಿಣ ಕನ್ನಡ-265, ದಾವಣಗೆರೆ-30,  ಧಾರವಾಡ-12, ಗದಗ-7, ಹಾಸನ-383, ಹಾವೇರಿ-12, ಕಲಬುರಗಿ-26,  ಕೊಡಗು-120, ಕೋಲಾರ-64, ಕೊಪ್ಪಳ-5, ಮಂಡ್ಯ-84, ಮೈಸೂರು-371, ರಾಯಚೂರು-09, ರಾಮನಗರ-10,  ಶಿವಮೊಗ್ಗ-140, ತುಮಕೂರು-126, ಉಡುಪಿ-108, ಉತ್ತರ ಕನ್ನಡ-56, ವಿಜಯಪುರ-7, ಯಾದಗಿರಿ-02.

Advertisement
Advertisement

Udayavani is now on Telegram. Click here to join our channel and stay updated with the latest news.

Next