ಅಂಕೋಲಾ: ಪಟ್ಟಣದ ಕೆಎಲ್‌ಇ ನರ್ಸಿಂಗ್ ವಸತಿ ನಿಲಯದಲ್ಲಿರುವ 28 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಆಗಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಕೆಎಲ್‌ಇ ವಸತಿ ನಿಲಯದ ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಪ್ರಕರಣ ಕಂಡುಬರುತ್ತಲೇ ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ವಸತಿ ನಿಲಯವನ್ನು ಸೀಲ್ಡೌನ್ ಮಾಡಿದ್ದಾರೆ.
ಕೆಎಲ್‌ಇ ನರ್ಸಿಂಗ್ ವಸತಿ ನಿಲಯದಲ್ಲಿ 152 ವಿದ್ಯಾರ್ಥಿಗಳಿದ್ದು ಅದರಲ್ಲಿ ಮೊದಲು ಶುಕ್ರವಾರ 22 ವಿದ್ಯಾರ್ಥಿಗಳಲ್ಲಿ ಪಾಸಿಟಿವ ಕಂಡು ಬಂದಿತ್ತು. ಬಳಿಕ ಶನಿವಾರ 6 ವಿದ್ಯಾರ್ಥಿಗಳಲ್ಲಿ ಪಾಸಿಟಿವ ಕಂಡು ಬಂದಿದೆ. ಈ ಕಾರಣದಿಂದ ವಸತಿ ನಿಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ವಸತಿ ನಿಲಯದಲ್ಲಿ ಇನ್ನೂಳಿದ ವಿದ್ಯಾರ್ಥಿಗಳಿಗೆ ಕೋವಿಡ ವ್ಯಾಪಿಸಬಾರದು ಎಂದು ಎಲ್ಲಾ ಪಾಸಿಟಿವ ಬಂದಿರುವ ವಿದ್ಯಾರ್ಥಿಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ನೀತಿನ ಹೊಸ್ಮೀಲ್ಕರ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಬ್ರಿ: ಕಾಲು ಜಾರಿ ಬಾವಿಗೆ ಬಿದ್ದ ಪ್ರಕರಣ; ಅಣ್ಣನೇ ತಮ್ಮನ ಕೊಲೆಗೈದಿರುವ ಶಂಕೆ
ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೋವಿಡ ಪಾಸಿಟಿವ ಆದ ಹಿನ್ನೇಲೆಯಲ್ಲಿ ಸೋಮವಾರದಿಂದ ಕೆಎಲ್‌ಇ ನರ್ಸಿಂಗ್ ಕಾಲೇಜಿನ ಎಲ್ಲಾ ತರಗತಿಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿದು ಬಂದಿದೆ.