Advertisement

ಬೀದರ್: ಜಿಲ್ಲೆಯಲ್ಲಿ ಸೋಮವಾರ 28 ಪಾಸಿಟಿವ್ ಪ್ರಕರಣ ಪತ್ತೆ

11:52 PM Jun 29, 2020 | Hari Prasad |

ಬೀದರ್: ಗಡಿನಾಡು ಬೀದರ್ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಕೋವಿಡ್ 19 ಸೋಂಕು ಸ್ಪೋಟಗೊಂಡಿದೆ.

Advertisement

ಒಂದೇ ದಿನ 28 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 390ಕ್ಕೆ ಏರಿಕೆ ಆಗಿದೆ.

ಜಿಲ್ಲೆಯಲ್ಲಿ ನಿನ್ನೆಯಷ್ಟೇ ಕೊಂಚ ತಗ್ಗಿದ್ದ ಕೋವಿಡ್ 19 ಪ್ರತಾಪ ಇಂದು ಮತ್ತೆ ಏರುಮುಖಗೊಂಡಿದ್ದು, ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಅಷ್ಟೇ ಅಲ್ಲದೆ ಬೀದರ್ ನಗರದಲ್ಲಿ ಅತೀ ಹೆಚ್ಚು 7 ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದೂ ಸಹ ಜಿಲ್ಲೆಯ ಜನರಲ್ಲಿ ಭೀತಿ ಹೆಚ್ಚಲು ಕಾರಣವಾಗಿದೆ. ಇನ್ನು ಈ ಆತಂಕದ ನಡುವೆಯೂ ಇಂದು 10 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಸೋಮವಾರ ಪತ್ತೆಯಾಗಿರುವ 28 ಜನ ಸೋಂಕಿತರಲ್ಲಿ 4 ಪ್ರಕರಣಗಳು 10 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದಿದೆ. ಬೀದರ ನಗರದಲ್ಲಿ 7, ತಾಲೂಕಿನ ಅಷ್ಟೂರ ಗ್ರಾಮದಲ್ಲಿ 1 ಸೇರಿ ಒಟ್ಟು 8 ಪ್ರಕರಣಗಳು, ಭಾಲ್ಕಿ ಪಟ್ಟಣದಲ್ಲಿ 1, ಕಳಸದಾಳದಲ್ಲಿ 3, ಬಳತದಲ್ಲಿ 2, ಜ್ಯಾಂತಿ ಮತ್ತು ಕೋಸಂ ಗ್ರಾಮಗಳಲ್ಲಿ ತಲಾ 1 ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು, ಕಮಲನಗರ ಪಟ್ಟಣದಲ್ಲಿ 2, ತಾಲೂಕಿನ ಬೆಡಕುಂದಾದಲ್ಲಿ 2 ಹಾಗೂ ಚಾಂದೂರಿಯಲ್ಲಿ 5 ಹಾಗೂ ಚಿಟಗುಪ್ಪ ಪಟ್ಟಣದಲ್ಲಿ 4 ಪ್ರಕರಣಗಳು ವರದಿಯಾಗಿವೆ.

Advertisement

ಜಿಲ್ಲೆಯಲ್ಲಿ ಈವರೆಗೆ 390 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇವರಲ್ಲಿ 19 ಸೊಂಕಿತರು ಸಾವನ್ನಪ್ಪಿದ್ದರೆ 466 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 105 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.

884 ಜನರ ವರದಿ ಬಾಕಿ: ಜಿಲ್ಲೆಯಲ್ಲಿ ಇನ್ನೂ 884 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿದೆ. ಸೋಮವಾರ 154 ಜನ ಸೇರಿ ಈವರೆಗೆ 38327 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 35,853 ಜನರ ತಪಾಸಣಾ ವರದಿ ನೆಗೆಟಿವ್ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next