Advertisement

ಚುನಾವಣಾ ಆಯುಕ್ತರ 27ನೇ ರಾಷ್ಟ್ರಮಟ್ಟದ ಸಮ್ಮೇಳನಕ್ಕೆ ಚಾಲನೆ

06:00 AM Dec 05, 2018 | Team Udayavani |

ಮೈಸೂರು: ಚುನಾವಣೆಗಳಲ್ಲಿ ಆನ್‌ಲೈನ್‌ ಓಟಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸುವುದು, ಹೊಸ ತಂತ್ರಜ್ಞಾನಗಳ ಅನುಷ್ಠಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಆಯೋಜಿಸಿರುವ ವಿವಿಧ ರಾಜ್ಯಗಳ ಚುನಾವಣಾ ಆಯುಕ್ತರ 27ನೇ 
ರಾಷ್ಟ್ರಮಟ್ಟದ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ದೊರೆಯಿತು.

Advertisement

ನಗರದ ಲಲಿತ ಮಹಲ್‌ ಹೋಟೆಲ್‌ ನಲ್ಲಿ ಆಯೋಜಿಸಿರುವ ಎರಡು ದಿನಗಳ ಸಮ್ಮೇಳನಕ್ಕೆ ಮಧ್ಯಪ್ರದೇಶ ರಾಜ್ಯ
ಚುನಾವಣಾ ಆಯುಕ್ತರೂ ಆದ ಸಮ್ಮೇಳನಾಧ್ಯಕ್ಷ ಪರಶುರಾಮ್‌ ಚಾಲನೆ ನೀಡಿದರು. ಸಮ್ಮೇಳನದಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ, ಇವಿಎಂ ಹಾಗೂ ಮಲ್ಟಿಚಾಯಿಸ್‌ ಇವಿಎಂ ಬಳಕೆ, ನಿಗದಿತ ವೇಳೆಗೆ ಚುನಾವಣೆ ನಡೆಸಲು ಎದುರಾಗುವ ಕಾನೂನು ತೊಡಕುಗಳು, ಚುನಾವಣಾ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸುವು ದು ಹಾಗೂ ಕಾನೂನಿನ ಸುಧಾರಣೆ ಮತ್ತು ಹೊಸ ನಿಯಮಗಳ ಕುರಿತಂತೆ ಚರ್ಚೆ ನಡೆಸಲಾ ಯಿತು. ಸಮ್ಮೇಳನದ ಉದ್ಘಾ ಟನಾ ಸಮಾರಂಭದಲ್ಲಿ ಚುನಾವಣಾ ಆಯೋಗದ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌. ಶ್ರೀನಿವಾಸಚಾರಿ, ಭಾರತ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನ‌ ನಿರ್ದೇಶಕ ವಿನಯ್‌ ಕುಮಾರ್‌ ಕಟ್ಯಾಲ್‌, ಎಲೆಕ್ಟ್ರಾನಿಕ್‌ ಕಾರ್ಪೊàರೇಷನ್‌ ಇಂಡಿಯ ಲಿಮಿಟೆಡ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಚೌಬೆ, ಭಾರತ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಸೇನಾಪತಿ, ಮೈಸೂರು ಅರಗು ಮತ್ತು ಬಣ್ಣದ
ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್‌ ದೊಡ್ಡಮನಿ, ಮಧ್ಯಪ್ರದೇಶ ರಾಜ್ಯ ಚುನಾವಣಾ ಆಯೋಗದ ಉಪ ಕಾರ್ಯದರ್ಶಿ ದೀಪಕ್‌ ಸಕ್ಸೇನಾ, ಐಎಲ್‌ ಅಂಡ್‌ ಎಫ್ ಎಸ್‌ನ ಉಪಾಧ್ಯಕ್ಷ ಪಂಕಜ್‌ ಗುಪ್ತಾ ಸೇರಿದಂತೆ 19 ರಾಜ್ಯಗಳ ಚುನಾವಣಾ ಆಯುಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next