Advertisement

ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!

09:24 AM Sep 22, 2020 | keerthan |

ಸಿಡ್ನಿ: ಸಮುದ್ರದ ದಂಡೆಗೆ ಬಂದು ಬಿದ್ದ ಸುಮಾರು 270 ತಿಮಿಂಗಿಲಗಳನ್ನು (ವೇಲ್ಸ್‌) ಸಾಗರ ಜೈವಿಕತಜ್ಞರು ರಕ್ಷಿಸಲು ಹರಸಾಹಸಪಟ್ಟ ಘಟನೆ ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪದಲ್ಲಿ ಸೋಮವಾರ ನಡೆದಿದೆ.

Advertisement

270ರಲ್ಲಿ ಕನಿಷ್ಠ 27 ಪೈಲಟ್‌ ತಿಮಿಂಗಿಲಗಳು ಈಗಾಗಲೇ ಸಾವನ್ನಪ್ಪಿವೆ. ಪೈಲಟ್‌ ತಿಮಿಂಗಿಲಗಳು ಡಾಲ್ಫಿನ್‌ ಪ್ರಭೇದಕ್ಕೆ ಸೇರಿದ್ದು, 7 ಮೀ. ಉದ್ದ ಮತ್ತು 3 ಟನ್‌ ತೂಕ ಹೊಂದಿರುತ್ತವೆ. ಸಾಮಾನ್ಯವಾಗಿ ಡಾಲ್ಫಿನ್‌ ಮತ್ತು ವೇಲ್ಸ್‌ಗಳು ತಾಸ್ಮೇನಿಯಾ ದಡದಲ್ಲಿ ಪ್ರತಿ 2-3 ವಾರಗಳಿಗೊಮ್ಮೆ ಬಂದು ಬೀಳುತ್ತಲೇ ಇರುತ್ತವೆ.

ಇದನ್ನೂ ಓದಿ: “ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

ಆದರೆ, ಇದೇ ಮೊದಲ ಬಾರಿಗೆ ಬೃಹತ್‌ ಸಂಖ್ಯೆಯಲ್ಲಿ ತಿಮಿಂಗಿಲಗಳು ದಡದಲ್ಲಿ ಸಮೂಹಗೊಂಡಿರುವುದು ವಿಸ್ಮಯ ಹುಟ್ಟಿಸಿದೆ. “ವೇಲ್ಸ್‌ಗಳ ಗುಂಪಿನ ನಡುವೆ ಆಗಾಗ್ಗೆ ಸಂಘರ್ಷ ಏರ್ಪಡುತ್ತದೆ. ತಮ್ಮ ನಾಯಕನನ್ನು ಹಿಂಬಾಲಿಸಿಕೊಂಡು ಬರುವ ವೇಲ್ಸ್‌ಗಳು ಹೀಗೆ ದಡದಲ್ಲಿ ರಾಶಿ ಬೀಳುವುದು ಸಾಮಾನ್ಯ’ ಎಂದು ಗ್ರಿತ್‌ ವಿವಿಯ ವೇಲ್ಸ್‌ ಸಂಶೋಧಕ ಒಲಾಫ್ ಮೆನೆಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next