Advertisement

ಚತ್ತೀಸ್ ಗಢದ ದಂತೇವಾಡದಲ್ಲಿ 27 ನಕ್ಷಲರ ಶರಣಾಗತಿ

08:13 PM Nov 01, 2020 | Mithun PG |

ರಾಯ್ ಪುರ: ಚತ್ತೀಸ್ ಗಢದ ದಂತೇವಾಡದಲ್ಲಿ 27 ನಕ್ಷಲರು ಪೊಲೀಸರಿಗೆ ಶರಣಾಗತರಾಗಿದ್ದಾರೆ. ಇವರಲ್ಲಿ ಐವರ ಸುಳಿವು ಕೊಟ್ಟವರಿಗೆ ಪೊಲೀಸರು ಈ ಹಿಂದೆ ನಗದು ಬಹುಮಾನವನ್ನೂ ಕೂಡ ಘೋಷಿಸಿದ್ದರು.

Advertisement

ಮಾವೋವಾದಿ ಸಿದ್ದಾಂತಗಳಿಂದ ಬೇಸತ್ತು ಈ 29 ಮಂದಿ ನಕ್ಷಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜೂನ್ ನಲ್ಲಿ ನಕ್ಷಲರ ಪುನರ್ವಸತಿಗಾಗಿ ‘ಲಾನ್ ವರ್ರಾಟು’ ( ಗ್ರಾಮ/ ಮನೆಗಳಿಗೆ ಹಿಂದಿರುಗಿ) ಎಂಬ ಯೋಜನೆಯನ್ನು ಪೊಲೀಸರು ರೂಪಿಸಿದ್ದರು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಒಟ್ಟಾರೆ 177 ನಕ್ಷಲರು ಶರಣಾಗಿದ್ದರು.

ಭಾನುವಾರ (ನ.1) 6 ಮಹಿಳೆಯರು ಸೇರಿದಂತೆ ಸುಮಾರು 27 ಮಂದಿ ಬಾರ್ಸೂರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಇವರಲ್ಲಿ 11 ಮಂದಿ ಗುಫಾ ಗ್ರಾಮಕ್ಕೆ ಸೇರಿದವರು. 7 ಜನರು ಬೆದ್ಮಾ, ಐವರು ಮಂಗ್ನಾರ್, ಮೂವರು ಹಿತವಾಡ, ಓರ್ವ ಹಂದ್ವಾಡ ಗ್ರಾಮದ ನಿವಾಸಿಗಳು  ಎಂದು ದಾಂತೇವಾಡ ಎಸ್ ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಜ್ಬುಲ್ ಸಂಘಟನೆಯ ಕಾಶ್ಮೀರ ಮುಖ್ಯಸ್ಥನನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಭದ್ರತಾಪಡೆಗಳು

ಈ 27 ಮಂದಿ ಕೂಡ ದಂಡಕಾರಾಣ್ಯ ಅದಿವಾಸಿ ಕಿಸಾನ್ ಮಸ್ದೂರ್ ಸಂಘ, ಕ್ರಾಂತಿಕಾರಿ ಮಹಿಳಾ ಅದಿವಾಸಿ ಸಂಘ ಮುಂತಾದ ಸಂಘಗಳ ಸಕ್ರಿಯ ಸದಸ್ಯರಾಗಿದ್ದರು. ಇವರು ಪೊಲೀಸರ ಮೇಲೆ ದಾಳಿ ಪ್ರಕರಣದಲ್ಲಿ ಹಾಗೂ ಐಇಡಿ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಐವರ ಸುಳಿವು ನೀಡಿದವರಿಗೆ ಪೊಲೀಸರು ಈ ಹಿಂದೆ 1 ಲಕ್ಷ ಬಹುಮಾನ ಘೋಷಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next