Advertisement

ಎಸ್ಸಿ ಪಿ ಟಿಎಸ್ ಪಿ ಯೋಜನೆ ಅನುಷ್ಠಾನಕ್ಕೆ 26500 ಕೋಟಿ ರೂ. ಬಿಡುಗಡೆ : ಸಿಎಂ

02:20 PM Jul 02, 2021 | Team Udayavani |

ಬೆಂಗಳೂರು : 2021-22 ನೇ ಸಾಲಿನಲ್ಲಿ ಎಸ್ಸಿ ಪಿ ಗೆ 18333, ಎಸ್ಟಿ ಪಿಗೆ 7633 ಕೋಟಿ, ಒಟ್ಟು 26500. ಕೋಟಿ  ಹಣವನ್ನು ಎಸ್ಸಿ ಪಿ ಟಿಎಸ್ ಪಿ ಯೋಜನೆ ಅನುಷ್ಠಾನಕ್ಕೆ ಬಿಡುಗಡೆ ಮಾಡಲಾಗಿದೆ. ಕ್ರಿಯಾ ಯೋಜನೆ ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಶೇ 95 ರಷ್ಟು ಪಗ್ರತಿ ಸಾಧಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆ ಅನುಮೋದನೆ ನೀಡಲಾಗಿದೆ. ಇಲಾಖಾವಾರು ಅನುಮೋದನೆ ನೀಡಿ ನಿಗದಿತ ಅವಧಿಯಲ್ಲಿ ಯೋಜನೆ ಕಾರ್ಯಗತಗೊಳಿಸಲು ತೀರ್ಮಾನ ಮಾಡಲಾಗಿದೆ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅನುದಾನವನ್ನು ಡೈವರ್ಟ್  ಮಾಡಿಲ್ಲ. ಯಾವುದೇ ತಪ್ಪು ಕಲ್ಪನೆ ಇಟ್ಟುಕೊಳ್ಳಬಾರದು. ಮುಂದಿನ ಬಾರಿ 100% ಆಗಬೇಕು ಎಂದು ಹೇಳಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next