Advertisement

262 ಕೆ.ಜಿ ಗಾಂಜಾ ಜಪ್ತಿ; ಇಬ್ಬರ ಸೆರೆ

02:36 PM May 29, 2022 | Team Udayavani |

ಬೀದರ: ಅಕ್ರಮವಾಗಿ ಗೂಡ್ಸ್‌ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂ. ಮೌಲ್ಯದ 262 ಕೆ.ಜಿ ಗಾಂಜಾ ಜಪ್ತಿ ಮಾಡಿದ ಘಟನೆ ತಾಲೂಕಿನ ಬಗದಲ್‌ ಠಾಣೆ ವ್ಯಾಪ್ತಿಯ ಮೀನಕೇರಾ ಕ್ರಾಸ್‌ ಬಳಿ ಶನಿವಾರ ನಡೆದಿದೆ.

Advertisement

ಅಕ್ರಮವಾಗಿ ಹೈದರಾಬಾದ್‌ ಕಡೆಯಿಂದ ಹುಮನಾಬಾದಗೆ ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಘಟನೆ ಸಂಬಂಧ ಭಾಲ್ಕಿ ತಾಲೂಕಿನ ಶಾಮರಾಜಪುರನ ರಸ್ತುಮ್‌ ಅಲಿಯಾಸ್‌ ಖಾಲೀದ್‌ ಹಾಗೂ ಮಾವಿನಹಳ್ಳಿಯ ಮೋಹನ್‌ ಕಾಶಿನಾಥ ಎಂಬವರನ್ನು ಬಂಧಿಸಲಾಗಿದೆ. 26.20 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಟಾಟಾ ಗೂಡ್ಸ್‌ ವಾಹನ, ಒಂದು ಮೊಬೈಲ್‌ ಜಪ್ತಿ ಮಾಡಲಾಗಿದೆ.

ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ ನೇತೃತ್ವದಲ್ಲಿ ಪಿಎಸೈ ಸಂಗೀತಾ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಬಗದಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next