Advertisement

26ರ ಹರೆಯದ ಮಹಿಳೆಯ ಗ್ಯಾಂಗ್‌ ರೇಪ್‌, ಮಹಡಿಯಿಂದ ಹಾರಿ ಎಸ್ಕೇಪ್‌

11:35 AM Mar 14, 2017 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದೇಶವನ್ನೇ ನಾಚಿಸುವ ಅತ್ಯಂತ ಹೇಯ ಗ್ಯಾಂಗ್‌ ರೇಪ್‌ ಘಟನೆ ಪೂರ್ವ ದಿಲ್ಲಿಯ ಪಾಂಡವ ನಗರ ಪ್ರದೇಶದಲ್ಲಿ  ನಡೆದಿರುವುದು ವರದಿಯಾಗಿದೆ. 

Advertisement

ನಿನ್ನೆ ಸೋಮವಾರ ನಡೆದಿರುವ ಈ ಗ್ಯಾಂಗ್‌ ರೇಪ್‌ ಪ್ರಕರಣದ ಸಂತ್ರಸ್ತೆ ಅತ್ಯಾಚಾರಿಗಳು ತನ್ನನ್ನು ಕೂಡಿ ಹಾಕಿದ್ದ ಕಟ್ಟಡದ ಮೊದಲ ಮಹಡಿಯಿಂದ ಕೆಳಕ್ಕೆ ಹಾರಿ ತಪ್ಪಿಸಿಕೊಂಡು ಸ್ಥಳೀಯರ ಸಹಾಯ ಪಡೆದು ಪಾರಾಗಿ ಪೊಲೀಸರಿಗೆ ತನ್ನ ರೇಪ್‌ ಕಥನವನ್ನು ತಿಳಿಸಿ ದೂರು ದಾಖಲಿಸಿದ್ದಾಳೆ.

ಪೊಲೀಸರು ಒಡನೆಯೇ ಕಾರ್ಯಾಚರಣೆ ನಡೆಸಿ ಐವರೂ ರೇಪಿಸ್ಟ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಐವರು ಬಂಧಿತರನ್ನು ಲಕ್ಷಯ್‌ ಭಲ್ಲಾ, ವಿಕಾಸ್‌ ಕುಮಾರ್‌, ನವೀನ್‌, ಸ್ವರೀತ್‌ ಮತ್ತು ಪ್ರತೀಕ್‌ ಎಂದು ಗುರುತಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬನಾಗಿರುವ ಸ್ವರಿತ್‌, ಟೆಕ್‌ ಮಹೀಂದ್ರ ಕಂಪೆನಿಯಲ್ಲಿ ದುಡಿಯುತ್ತಿರುವ ಸಾಫ್ಟ್ ವೇರ್‌ ಇಂಜಿನಿಯರ್‌ ಆಗಿದ್ದಾನೆ. ಉಳಿದವರು ನೋಯ್ಡಾದಲ್ಲಿನ ಕಾಲ್‌ ಸೆಂಟರ್‌ ಉದ್ಯೋಗಿಗಳು ಎಂದು ಗೊತ್ತಾಗಿದೆ. ರೇಪ್‌ಗೆ ಗುರಿಯಾದ 26ರ ಹರೆಯದ ಮಹಿಳೆಯು ವಿವಾಹಿತೆಯಾಗಿದ್ದು ಆಕೆ ಎರಡು ಮಕ್ಕಳ ತಾಯಿ. 

ಆಕೆಗೆ ಎರಡು ತಿಂಗಳಿಂದ ಪರಿಚಿತನಾಗಿರುವ ವಿಕಾಸ್‌ ಎಂಬಾತನು ಆಕೆಯನ್ನು  ಕಳೆದ ರಾತ್ರಿ ಮುನ್ರಿಕಾ ಎಂಬಲ್ಲಿ ಭೇಟಿಯಾಗಿ ಪಾಂಡವ ನಗರದ ಫ್ಲ್ಯಾಟ್‌ ಒಂದಕ್ಕೆ ಸ್ನೇಹಿತರೊಂದಿಗೆ ಪಾರ್ಟಿ ಇದೆ ಎಂದು ಕರೆದೊಯ್ದಿದ್ದಾನೆ.  ಪಾಂಡವ ನಗರಕ್ಕೆ ಹೋಗುವಾಗ ವಿಕಾಸ್‌ನ ಇಬ್ಬರು ಸ್ನೇಹಿತರು ಆತನನ್ನು ಕೂಡಿಕೊಂಡಿದ್ದಾರೆ.

Advertisement

ಫ್ಲಾಟ್‌ ತಲುಪಿದಾಗ ಅಲ್ಲಿ ಇನ್ನೂ ಇಬ್ಬರು ಅಪರಿಚಿತರು ಇರುವುದನ್ನು ಕಂಡು ಮಹಿಳೆಯು ಆಕ್ಷೇಪಿಸಿದ್ದಾಳೆ. ಆಗ ವಿಕಾಸ್‌ ತನಗೆ ಸ್ವಲ್ಪ ಕೆಲಸವಿದೆ; ತಾನು ಬೇಗನೆ ಆ ಕೆಲಸ ಮುಗಿಸಿ ಮರಳುವೆ ಎಂದು ಮಹಿಳೆಗೆ ಹೇಳಿ ಅಲ್ಲಿಂದ ಹೊರಗೆ ಹೋಗಿದ್ದಾನೆ.

ತದನಂತರ ಅಲ್ಲಿದ್ದ ನಾಲ್ವರು ಪುರುಷರು ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಆಕೆಗೆ ಅಮಲು ಬರಿಸಿ ಸರದಿ ಪ್ರಕಾರ ಆಕೆಯನ್ನು ರೇಪ್‌ ಮಾಡಿದ್ದಾರೆ. ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಂದೇ ಬಿಡುವುದಾಗಿ ಆಕೆಯನ್ನು ಅವರು ಬೆದರಿಸಿ ಆಕೆಯನ್ನು ಕೋಣೆಯೊಳಗೆ ಕೂಡಿ ಹಾಕಿ, ಅಲ್ಲಿಂದ ಅವರು ಹೋಗಿದ್ದಾರೆ. 

ಮಹಿಳೆಯು ನಸುಕಿನ 5.30ರ ಹೊತ್ತಿಗೆ ತನ್ನನ್ನು ಕೂಡಿ ಹಾಕಲಾಗಿದ್ದ ಕೋಣೆಯ ಬಾಲ್ಕನಿಯನ್ನು ಪ್ರವೇಶಿಸಿ ಅಲ್ಲಿಂದ, ಅಂದರೆ ಒಂದನೇ ಮಹಡಿಯಿಂದ ಕೆಳಕ್ಕೆ ಹಾರಿ ತಪ್ಪಿಸಿಕೊಂಡಿದ್ದಾಳೆ. ಮೇಲಿಂದ ಕೆಳಕ್ಕೆ ಹಾರಿದ ಕಾರಣ ಆಕೆಯ ಕಾಲಿಗೆ ಗಾಯಗಳವಾಗಿವೆ.

ಪೊಲೀಸರು ಆಕೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಆಕೆಯ ಮೇಲೆ ಅತ್ಯಾಚಾರವಾಗಿದೆಯೇ ಎಂಬುದನ್ನು ದೃಢ ಪಡಿಸಿಕೊಳ್ಳುವ ಪರೀಕ್ಷೆಗೆ ಒಳಪಡಿಸಿದ್ದಾರೆ. 

ಪೊಲೀಸರು ಎಲ್ಲ ಐವರು ಆರೋಪಿಗಳನ್ನು ಸೆರೆ ಹಿಡಿದು ತನಿಖೆ ನಡೆಸುತ್ತಿದ್ದಾರೆ. ಆದರೆ ರೇಪ್‌ ಸಂತ್ರಸ್ತೆಯು ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ಪೊಲೀಸರಿಗೆ ತನಿಖೆಯಲ್ಲಿ ತೊಂದರೆಗಳು ಎದುರಾಗುತ್ತಿವೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next