Advertisement
ಹಿಲಿಯಾಣ ಶಾಲೆ ಬಳಿ ನಿವಾಸಿ ಗೋಪಾಲ ಮಡಿವಾಳ ಅವರು 1994ರ ಅಗೋಸ್ಟ್ 16ರಂದು ಒಂದು ವರ್ಷ ಪ್ರಾಯದ ಗಂಡು ಕರುವನ್ನು ದೇವರಿಗೆ ಹರಕೆ ರೂಪದಲ್ಲಿ ಬಿಟ್ಟರು. ಅಂದಿನಿಂದ ಇಂದಿನ ತನಕ ಈ ಬಸವ ಹಿಲಿಯಾಣ ಗ್ರಾಮದಲ್ಲಿ ಮನೆ ಮನೆ ಸುತ್ತಾಡಿಕೊಂಡು ರಾತ್ರಿ ಗರೋಡಿಗೆ ಬಂದು ಮಲಗುತ್ತಿತ್ತು. ಸುಮಾರು 26 ವರ್ಷ ಪ್ರಾಯದಿಂದಲೂ ಸೌಮ್ಯ ಸ್ವಭಾವದಿಂದ ಕೂಡಿದೆ. ಹಿಲಿಯಾಣದ ಗ್ರಾಮದವರು ಬಸವ ಮನೆಗೆ ಬಂದಾಗ ಗರೋಡಿಯ ದೇವರು ಮನೆಗೆ ಬಂದಿದ್ದಾರೆ ಎಂದು ಭಕ್ತಿಯಿಂದ ಆಹಾರ ನೀಡಿ, ಕಾಲಿಗೆ ನಮಸ್ಕRರಿಸುತ್ತಿದ್ದರು. ಜನರಿಗೆ ಅಚ್ಚು ಮೆಚ್ಚಿನ ದೇವರ ಬಸವನಾಗಿದ ಎತ್ತನ್ನು ಗರೋಡಿಯಲ್ಲಿ ಪ್ರತಿ ಸಂಕ್ರಮಣ, ಕಾಯದಾ ಪೂಜೆ, ಗೋವು ಪೂಜೆ, ವಾರ್ಷಿಕ ನೇಮೋತ್ಸವದಂದು ಸ್ನಾನ ಮಾಡಿಸಿ, ಹೂ ಹಾರಗಳಿಂದ ಶೃಂಗ ರಿಸುವ ಮೂಲಕ ದೇವರ ಪ್ರಸಾದ ಹಾಕಿ ಪೂಜಿಸುತ್ತಿದ್ದರು. ಹಿಲಿಯಾಣ ಪರಿಸರದಲ್ಲಿ ತಿರುಗಾಡಿಕೊಂಡಿದ ಬಸವ ಹಿಲಿಯಾಣ ಪಕ್ಕದ ಗ್ರಾಮವಾದ ಹಳ್ಳಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಕೊನೆಯು ಸಿರೆಳಿದಿದೆ.
Advertisement
ಹರಕೆ ರೂಪದಲ್ಲಿ ಬಿಟ್ಟ 26 ವರ್ಷ ಪ್ರಾಯದ ಬಸವ; ಹಿಲಿಯಾಣ ಗರೋಡಿ ಬಸವ ಇನ್ನಿಲ್ಲ
11:01 PM Jan 23, 2020 | Sriram |
Advertisement
Udayavani is now on Telegram. Click here to join our channel and stay updated with the latest news.