Advertisement
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ಇದು ನನ್ನ ಜೀವನದಲ್ಲಿ ಮೈಲಿಗಲ್ಲು ಎನ್ನಬಹುದು. ನಟನೆ ಹಾಗೂ ದೈಹಿಕವಾಗಿ ಹೊಸ ಅನುಭವ. ಇಂತಹ ಸಾಹಸಮಯ ಪಾತ್ರ ಸೂಟ್ ಆಗುವುದಿಲ್ಲವೆಂದು ಎಲ್ಲರೂ, ಅಲ್ಲದೆ ಉಪ್ಪಿ ಸಹ ಹೇಳಿದ್ದರು. ಆದರೆ ನಾನು ಮೊಂಡು ಸ್ವಭಾವದವಳು. ಆಗೋಲ್ಲ ಅಂದರೆ ಅದನ್ನು ಮಾಡಬೇಕೆಂದು ಬಯಸುತ್ತೇನೆ. ಇದನ್ನು ನಿರ್ದೇಶಕರು ತಿಳಿದುಕೊಂಡು, ಅದರಂತೆ ಕೆಲಸ ತೆಗೆದುಕೊಂಡಿದ್ದಾರೆ. ಇದರ ಕ್ರೆಡಿಟ್ ಸಂಪೂರ್ಣ ತಂಡಕ್ಕೆ ಸಲ್ಲಬೇಕು. ಮುಖ್ಯವಾಗಿ ಮಾಧ್ಯಮದ ಸಹಕಾರ ಎಂದಿಗೂ ಮರೆಯಲಾಗದು. ಮಹಿಳಾ ಪ್ರಧಾನ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿದೆ. ಅಂಥದ್ದರಲ್ಲಿ ಉಗ್ರಾವತಾರ 25 ದಿನಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಎಲ್ಲ ರೀತಿಯ ಪ್ರತಿಭೆಗಳು ಬಂದಾಗ ಮಾತ್ರ ಚಿತ್ರರಂಗ ಬೆಳೆಯುತ್ತೆ. ಇದನ್ನು ಚಾಲೆಂಜ್ ಎಂದು ತೆಗೆದುಕೊಂಡಿದ್ದಕ್ಕೂ ಸಾರ್ಥಕವಾಗಿದೆ. ಮುಂದೆಯೂ ಒಳ್ಳೆ ಅಂಶಗಳು, ತೂಕದ ಸಂದೇಶ ಇರುವ ಚಿತ್ರಗಳಲ್ಲಿ ಅಭಿನಯಿಸಲು ಪ್ರಯತ್ನ ಪಡುತ್ತೇನೆ ಎಂದರು.
Advertisement
Priyanka Upendra: 25ರ ಸಂಭ್ರಮದಲ್ಲಿ ʼಉಗ್ರಾವತಾರʼ
02:53 PM Dec 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.