Advertisement
ಇಲ್ಲಿನ ಮುಚ್ಚಂಡಿ ಗ್ರಾಮದ ಮಲ್ಲಪ್ಪ ಸುಗಣಿ ಪಾಟೀಲ ಎಂಬವರು ತಮ್ಮ ಮನೆಯಲ್ಲಿದ್ದ ಪ್ರೀತಿಯ ಆಕಳು 25ನೇ ವರ್ಷದ ಜನ್ಮದಿನ ಆಚರಿಸಿದರು. ಜನ್ಮದಿನ ಆಚರಣೆಗೆ ಗ್ರಾಮದ ರೈತರಿಗೆ ಆಮಂತ್ರಣ ನೀಡಲಾಗಿತ್ತು. ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸುಮಂಗಲಿಯರು ಕಲಶ ಪೂಜೆ ಮಾಡಿ ಗ್ರಾಮದ ಎಲ್ಲ ದೇವರಿಗೆ ಪೂಜೆ ಸಲ್ಲಿಸಿದರು.25 ವರ್ಷದ ಈ ಆಕಳು ಈವರೆಗೆ ಎಂಟು ಶರ್ಯತ್ತಿನ ಎತ್ತುಗಳಿಗೆ ಜನ್ಮ ನೀಡಿದೆ. ಗ್ರಾಮದ ಮುಖ್ಯ ದೇವಸ್ಥಾನಗಳ ವಾಸ್ತು ಶಾಂತಿ ಹಾಗೂ ಪ್ರವೇಶವನ್ನು ಈ ಆಕಳು ನೆರವೇರಿಸುತ್ತದೆ. 3೦೦ಕ್ಕೂ ಹೆಚ್ಚು ಗೃಹಪ್ರವೇಶಗಳಿಗೆ ಈ ಗೋ ಮಾತೆಯನ್ನು ಆಹ್ವಾನಿಸುತ್ತಾರೆ. ಸುಮಾರು 25 ವರ್ಷಗಳ ಅವಧಿಯಲ್ಲಿ ತನ್ನ ಮಾಲಿಕನಿಗೆ ಅತೀ ಹೆಚ್ಚು ಲಾಭ ಮಾಡಿಕೊಟ್ಟಿರುವ ಈ ಗೋ ಮಾತೆಯ ಋಣವನ್ನು ತೀರಿಸುವ ಉದ್ದೇಶದಿಂದ ಈ ಆಕಳುವಿನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುವ ಮೂಲಕ ಇದರ ಯಜಮಾನ ತನ್ನ ಗೋಪ್ರೀತಿಯನ್ನು ಪ್ರಚುರಪಡಿಸಿದ್ದಾರೆ.