Advertisement

ಕೋವಿಡ್: ರಾಜ್ಯದಲ್ಲಿಂದು 3344 ಸೋಂಕಿತರು ಗುಣಮುಖ; 2530 ಹೊಸ ಪ್ರಕರಣ ಪತ್ತೆ

08:14 PM Jul 08, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿಂದು ಹೊಸದಾಗಿ 2530 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ, ಹಾಗೂ ಸೋಂಕಿನಿಂದ 62 ಜನರು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ-08) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಕಳೆದ 24 ಗಂಟೆಗಳ ( ದಿನಾಂಕ:07.07.2021,00:00 ರಿಂದ 23:59 ರವರೆಗೆ) ಅವಧಿಯಲ್ಲಿ 3344 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2790453ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-3, ಬಳ್ಳಾರಿ-18, ಬೆಳಗಾವಿ-176, ಬೆಂಗಳೂರು ಗ್ರಾಮಾಂತರ-59, ಬೆಂಗಳೂರು ನಗರ-514, ಬೀದರ್-3, ಚಾಮರಾಜ ನಗರ-47, ಚಿಕ್ಕಬಳ್ಳಾಪುರ-18, ಚಿಕ್ಕಮಗಳೂರು-114, ಚಿತ್ರದುರ್ಗ-30, ದಕ್ಷಿಣ ಕನ್ನಡ-210, ದಾವಣಗೆರೆ-28, ಧಾರವಾಡ-19,  ಗದಗ-5,  ಹಾಸನ-202, ಹಾವೇರಿ-9, ಕಲಬುರಗಿ-11, ಕೊಡಗು-81, ಕೋಲಾರ-63, ಕೊಪ್ಪಳ-12, ಮಂಡ್ಯ-88, ಮೈಸೂರು-294, ರಾಯಚೂರು-2, ರಾಮನಗರ-15, ಶಿವಮೊಗ್ಗ-167, ತುಮಕೂರು-136, ಉಡುಪಿ-148, ಉತ್ತರ ಕನ್ನಡ-49, ವಿಜಯಪುರ-4, ಯಾದಿಗಿರಿ-5.

Advertisement

Udayavani is now on Telegram. Click here to join our channel and stay updated with the latest news.

Next