Advertisement

252.50 ಕೋ.ರೂ. ಯೋಜನೆಗಳಿಗೆ ಚಾಲನೆ

04:03 PM Oct 20, 2017 | Team Udayavani |

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 148.29 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ 104.21 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.22ರಂದು ನೆರವೇರಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 252.50 ಕೋ.ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಕ್ಷೇತ್ರದ ಹಲವಾರು ಬಹು ನಿರೀಕ್ಷಿತ ಯೋಜನೆಗಳು ಅಂದು ಲೋಕಾರ್ಪಣೆ ಗೊಳ್ಳಲಿದ್ದು, ಜನತೆಯ ದೀರ್ಘ‌ಕಾಲದ ಬೇಡಿಕೆಗಳು ಈಡೇರಲಿವೆ. ಅಭಿವೃದ್ಧಿಯ ಪಥದಲ್ಲಿ ಬಂಟ್ವಾಳ ಕ್ಷೇತ್ರ ಹೊಸ ಮೈಲುಗಲ್ಲನ್ನೇ ತಲುಪಿದೆ ಎಂದವರು ಹೇಳಿದರು. 

ಬಿ.ಸಿ.ರೋಡ್‌ನ‌ಲ್ಲಿ 90 ಸೆಂಟ್ಸ್‌ ವಿಸ್ತೀರ್ಣದ ಜಮೀನಿನಲ್ಲಿ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ (ಕಟ್ಟಡದ ವಿಸ್ತೀರ್ಣ 3225 ಚ.ಮೀ.), ಬಂಟ್ವಾಳದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ ನಿರೀಕ್ಷಣಾ ಮಂದಿರ, ಬಿ.ಸಿ. ರೋಡ್‌ನ‌ಲ್ಲಿ 1.50 ಎಕ್ರೆ ನಿವೇಶನದಲ್ಲಿ ಅಂದಾಜು 10.07 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೆ.ಎಸ್‌.ಆರ್‌.ಟಿ.ಸಿ ನೂತನ ಹೈಟೆಕ್‌ ಬಸ್‌ ನಿಲ್ದಾಣ ಗಳನ್ನು ಉದ್ಘಾಟಿಸಲಾಗುವುದು. 

ಬಂಟ್ವಾಳದ 30 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆ ಯನ್ನು ಅಂದಾಜು 6.15 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸಲಾಗಿದೆ. ಬಿ.ಮೂಡ ಗ್ರಾಮದಲ್ಲಿ 5.16 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಮೆಸ್ಕಾಂ ಕಟ್ಟಡ ಉದ್ಘಾ ಟನೆಗೊಳ್ಳಲಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿ ಯನ್ನು ಮೂಲ ವಾಗಿರಿಸಿ ಕೊಂಡು ಬಂಟ್ವಾಳ ಪಟ್ಟಣಕ್ಕೆ 52.79 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ನೀರು ಸರಬರಾಜು ಯೋಜನೆಯ ಕಾಮಗಾರಿ, ಬಂಟ್ವಾಳ ಐಬಿ ಪಕ್ಕದಲ್ಲಿ ನೇತ್ರಾವತಿ ನದಿ ತೀರದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಟ್ರೀ ಪಾರ್ಕ್‌, ಬಂಟ್ವಾಳಕ್ಕೆ ಮಂಜೂರುಗೊಳಿಸಲಾದ ನೂತನ ಆರ್‌ಟಿಒ ಕಚೇರಿಗೆ ಚಾಲನೆ ನೀಡಲಾಗು ವುದು ಎಂದವರು ಹೇಳಿದರು.

ಶಂಕುಸ್ಥಾಪನೆಯಾಗಲಿರುವ
ಯೋಜನೆಗಳು

ಬಂಟ್ವಾಳ ತಾಲೂಕಿನ ನರಿಕೊಂಬು, ಬಾಳ್ತಿಲ, ಗೋಳ್ತಮಜಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ 39 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ 16.97 ಕೋಟಿ ರೂ. ವೆಚ್ಚದ ನರಿಕೊಂಬು ಯೋಜನೆ, 29.93 ಕೋಟಿ ರೂ. ವೆಚ್ಚದ ಸರಪಾಡಿ, ನಾವೂರು, ಬಡಗಕಜೆಕಾರು, ಕಾವಳಪಡೂರು, ಕಾವಳ ಮೂಡೂರು, ಪಿಲಾತಬೆಟ್ಟು, ಇರ್ವತ್ತೂರು, ಉಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ 97 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಸರಪಾಡಿ ಯೋಜನೆಗೆ ಸಿಎಂ ಶಂಕುಸ್ಥಾಪನೆ ನೆರವೇರಿ ಸುವರು. 16.46 ಕೋಟಿ ರೂ. ವೆಚ್ಚದಲ್ಲಿ ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಟ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ 51 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಗೂ ಶಿಲಾನ್ಯಾಸ ನೆರವೇರಿಸ ಲಾಗುವುದು. 

Advertisement

ಅರಳ ಗ್ರಾಮದ ಮೂಲರಪಟ್ನ ಎಂಬಲ್ಲಿ 4.85 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಬಿ.ಮೂಡ ಗ್ರಾಮದಲ್ಲಿ 51 ಸೆಂಟ್ಸ್‌ ನಿವೇಶನದಲ್ಲಿ 5 ಕೋಟಿ ರೂ. ವೆಚ್ಚ ದಲ್ಲಿ ಪಂಜೆ ಮಂಗೇಶರಾಯರ ಸ್ಮಾರಕ ಭವನ, ಅಜಿಲಮೊಗರು  ಕಡೇಶ್ವಾಲ್ಯ ನಡುವೆ ನೇತ್ರಾವತಿ ನದಿಗೆ 31 ಕೋಟಿ. ರೂ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸ ಲಾಗುವುದು ಎಂದು ಅವರು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಕುಮಾರ್‌, ಜಿಲ್ಲಾ ಎಸ್ಪಿ ಸುಧೀರ್‌ ರೆಡ್ಡಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್‌.ಖಾದರ್‌ ಉಪಸ್ಥಿತರಿದ್ದರು.

145 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ
ಸಚಿವ ರಮಾನಾಥ ರೈ ಮಾತನಾಡಿ, ಬಂಟ್ವಾಳ ತಾಲೂಕಿನ ಕನ್ಯಾನ, ಕರೋಪಾಡಿ, ಕೊಳ್ನಾಡು ಮತ್ತು ವಿಟ್ಲಪಟ್ನೂರು ಗ್ರಾಮಗಳ 79 ಜನವಸತಿ ಪ್ರದೇಶಗಳಿಗೆ ನೀರು ಒದಗಿ ಸುವ ಯೋಜನೆ 25.82 ಕೋಟಿ ರೂ. ವೆಚ್ಚದ ಕರೋಪಾಡಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ 34.95 ಕೋಟಿ. ರೂ. ವೆಚ್ಚದಲ್ಲಿ ಸಂಗಬೆಟ್ಟು, ಕುಕ್ಕಿಪ್ಪಾಡಿ, ಚೆನ್ನೈತ್ತೋಡಿ, ರಾಯಿ, ಅರಳ, ಪಂಜಿಕಲ್ಲು, ಅಮಾrಡಿ, ಕಳ್ಳಿಗೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ 66 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next