Advertisement

ಭತ್ತ ಬೆಳೆ ಹಾನಿಗೆ 25 ಸಾವಿರ ರೂ. ಪರಿಹಾರ ನೀಡಲು ಆಗ್ರಹ

07:38 AM May 31, 2020 | Suhan S |

ದಾವಣಗೆರೆ: ಮೆಕ್ಕೆಜೋಳ ಬೆಳೆಗಾರರ ಮಾದರಿಯಲ್ಲೇ ಭತ್ತ ಬೆಳೆದಿರುವ ರೈತರಿಗೂ ಸಹ 5 ಸಾವಿರ ರೂ. ಬೆಳೆ ಹಾನಿ ಪರಿಹಾರ ಘೋಷಿಸಲು ಒತ್ತಾಯಿಸಿ ಶನಿವಾರ ರೈತಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಪತ್ರ ರವಾನೆ ಮಾಡಿದ್ದಾರೆ.

Advertisement

ಕೋವಿಡ್, ಲಾಕ್‌ಡೌನ್‌ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದವರಿಗೆ 5 ಸಾವಿರ ಬೆಳೆ ಹಾನಿ ಪರಿಹಾರ ಘೋಷಿಸಿದೆ. ಆದರೆ, ಭತ್ತ ಬೆಳೆದಂತಹವರನ್ನೇ ಮರೆತಿದೆ. ಮೆಕ್ಕೆಜೋಳ ಬೆಳೆದವರು,

ಭತ್ತ ಬೆಳೆದವರು ಎಂಬ ತಾರತಮ್ಯಮಾಡದೆ ಭತ್ತ ಬೆಳೆದವರಿಗೂ ಸಹ 5 ಸಾವಿರ ಬೆಳೆ ಹಾನಿಪರಿಹಾರ ಘೋಷಿಸಬೇಕು ಎಂದು ಕಾರ್ಯಕರ್ತರು ಪತ್ರ ಚಳವಳಿ ನಡೆಸಿದರು. ರೈತರು 1 ಎಕರೆಗೆ ಮೆಕ್ಕೆಜೋಳ ಬೆಳೆಯಲು 15 ಸಾವಿರ ರೂ. ವೆಚ್ಚ ತಗಲುತ್ತದೆ. ಹಾಗಾಗಿ ಎಲ್ಲಾ ರೈತರಿಗೆ 15 ಸಾವಿರ, ಭತ್ತ ಬೆಳೆದವರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಳ್ಳಿ ಮಂಜುನಾಥ್‌, ಹಸಿರು ಸೇನೆ ಅಧ್ಯಕ್ಷ ಆಲೂರು ಪರಶುರಾಮ್‌, ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next