Advertisement
ನಗರದಲ್ಲಿ ಕೊರೊನಾ ವ್ಯಾಪಕವಾಗಿಹರಡಬಾರದು ಎಂದು ಮುಂಜಾಗ್ರತಾ ಕ್ರಮಗಳನ್ನುಕೈಗೊಂಡಿರುವ ಪಾಲಿಕೆ, ಜನರಲ್ಲಿ ಕೊರೊನಾ ಮತ್ತುಒಮಿಕ್ರಾನ್ ನಿಯಂತ್ರಣಕ್ಕಾಗಿ ಜನರು ಜಾಗೃತಿವಹಿಸಲು ಸೂಚಿ ಸುತ್ತಿದೆ. ರಾಜ್ಯದಲ್ಲಿ ಕೊರೊನಾಜೊತೆಗೆ ಒಮ್ರಿಕಾನ್ ಹೆಚ್ಚಳ ವಾಗು ತ್ತಿರುವ ಭೀತಿಯಹಿನ್ನಲೆ ರಾಜ್ಯ ಸರ್ಕಾರ ಡಿ.28ರಿಂದ ನೈಟ್ ಕರ್ಫ್ಯೂಜಾರಿ ಗೊಳಿಸಿ ಮಾರ್ಗ ಸೂಚಿ ಹೊರಡಿಸಿದೆ.
Related Articles
Advertisement
ತುಮಕೂರು ನಗರದಲ್ಲಿ ಕೊರೊನಾ ಲಸಿಕೆ ನೀಡುವಲ್ಲಿ ಉತ್ತಮ ಸಾಧನೆಯಲ್ಲಿದೆ. ಮೊದಲ ಡೋಸ್ ಶೇ.109ರಷ್ಟು ಸಾಧನೆಯಾಗಿದೆ. ಕೋವಿಡ್ ಮೊದಲ ಡೋಸ್ ಲಸಿಕೆಯನ್ನು ಜನರು ಹಾಕಿಸಿಕೊಂಡಿದ್ದಾರೆ.ಆದರೆ, ಎರಡನೇ ಡೋಸ್ ಲಸಿಕೆಯಲ್ಲಿ ಸಾಧನೆ ಕಡಿಮೆಯಾಗಿದ್ದು, ಶೇ.78ರಷ್ಟು ಪ್ರಗತಿಯಾಗಿದೆ. ನಗರದ ಪ್ರತಿ ಪಿಎಚ್‌ಸಿ ಕೇಂದ್ರ ಮತ್ತು ನಿಗದಿಪಡಿಸಿರುವ ಸ್ಥಳಗಳಲ್ಲಿ ಮಹಾಮೇಳಗಳನ್ನು ಮಾಡಿ, ಲಸಿಕೆ ಯನ್ನು ಹಾಕಲಾಗುತ್ತಿದ್ದು, ಯಾರು ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯದವರು ಕಡ್ಡಾಯವಾಗಿಲಸಿಕೆ ಪಡೆಯಬೇಕು ಎಂದು ಪಾಲಿಕೆ ಎಚ್ಚರಿಸುತ್ತಿದೆ. ಅವಧಿ ಮೀರಿದರೂ 2ನೇ ಡೋಸ್ ಲಸಿಕೆಪಡೆಯದವರನ್ನು ಫೋನ್ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ. ಪ್ರತಿ ಬುಧವಾರ ಆಯಾ ವಾರ್ಡ್ ಪ್ರದೇಶದಲ್ಲಿ ಲಸಿಕೆ ಮೇಳ ಆಯೋಜಿಸುತ್ತಿದ್ದು, ಲಸಿಕೆ ಬಾಕಿ ಉಳಿಸಿಕೊಂಡವರ ಬಗ್ಗೆ ಅಂಗನವಾಡಿಕಾರ್ಯ ಕರ್ತೆಯರಿಂದ ಮನೆ ಮನೆ ಸಮೀಕ್ಷೆ ಮಾಡಿಸಲಾಗುತ್ತಿದೆ. ಜನರು ತಪ್ಪದೇ ಲಸಿಕೆ ಪಡೆಯಿರಿ ಎಂದು ಆಯುಕ್ತೆ ರೇಣುಕಾ ಮನವಿ ಮಾಡಿದ್ದಾರೆ.
ನಗರದಲ್ಲಿ ಈಗಕೊರೊನಾನಿಯಂತ್ರಣದಲ್ಲಿದೆ.ದಿನಕ್ಕೆ 1-2 ಪಾಸಿ ಟೀವ್ ಬರುತ್ತಿವೆ. ಬೇರೆ ಕಡೆ ಕೊರೊನಾ ಹೆಚ್ಚುತ್ತಿರುವ ಹಿನ್ನಲೆ ನಮ್ಮಲ್ಲಿಯೂ ನೈಟ್ ಕರ್ಫ್ಯೂಜಾರಿ, ಕಠಿಣ ಕ್ರಮಗಳ ಅನುಷ್ಠಾನಕ್ಕೆ ತಂದಿದ್ದು, ಸರ್ಕಾ ರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ.ಸೋಂಕಿನ ತಡೆಗೆ ನಾಗರಿಕರ ಸಹಕಾರಅಗತ್ಯ. ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲಾಡಳಿತದ ಮಾರ್ಗದರ್ಶನಲ್ಲಿ ಕ್ರಮ ಕೈಗೊಳ್ಳಲಾಗುವುದು. – ರೇಣುಕಾ, ಆಯುಕ್ತೆ, ಮಹಾನಗರಪಾಲಿಕೆ
ರಾಜ್ಯದ ವಿವಿಧೆಡೆ ಒಮಿಕ್ರಾನ್, ಕೊರೊನಾಜಾಸ್ತಿಯಾಗುತ್ತಿದೆ.ದೇವರ ದಯೆ ಈಗ ನಮ್ಮ ನಗರದಲ್ಲಿಕೊರೊನಾ ನಿಯಂ ತ್ರಣದಲ್ಲಿದೆ. ಸೋಂಕುಹರಡಬಾರದು ಎಂದು ನಗರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ.ಮಾಸ್ಕ್ ಹಾಕದಿದ್ದರೆ ದಂಡ ಹಾಕುವುದುಸೇರಿದಂತೆ ಇತರೆ ಕ್ರಮ ಕೈಗೊಳ್ಳಲುಮುಂದಾಗಿದ್ದು, ಜನರು ಕೊರೊನಾ ತಡೆಗೆಸಹಕಾರ ನೀಡಬೇಕು. –ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮೇಯರ್
– ಚಿ.ನಿ.ಪುರುಷೋತ್ತಮ್