Advertisement
ಇಂದಿರಾ ಕ್ಯಾಂಟೀನ್ ಸೇವೆ ಮತ್ತು ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Related Articles
Advertisement
“ಬೆಂಗಳೂರು ಹೊರತುಪಡಿಸಿ ಇತರ ಸ್ಥಳಗಳಲ್ಲಿ, ಸರ್ಕಾರವು ಶೇಕಡಾ 70 ರಷ್ಟು ವೆಚ್ಚವನ್ನು ಭರಿಸಲಿದೆ, ಉಳಿದ ಶೇಕಡಾ 30 ರಷ್ಟು ಅಲ್ಲಿನ ಸ್ಥಳೀಯ ನಾಗರಿಕ ಸಂಸ್ಥೆಗಳು ಭರಿಸಲಿವೆ” ಎಂದು ಸಿದ್ದರಾಮಯ್ಯ ಹೇಳಿದರು, ಹೊಸದಾಗಿ ಕ್ಯಾಂಟೀನ್ ತೆರೆಯಬೇಕಾದ ಸ್ಥಳಗಳ ಪಟ್ಟಿಯನ್ನು ಕೇಳಿದ್ದೇನೆ ಎಂದು ತಿಳಿಸಿದರು.
ಹೊಸ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ, ನಂತರ ಮೆನು ಕೂಡ ಬದಲಾಗಲಿದೆ ಎಂದು ಹೇಳಿದರು. ಪ್ರಮಾಣ, ಗುಣಮಟ್ಟ, ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು. ಯಾವುದೇ ಬೆಲೆ ಪರಿಷ್ಕರಣೆ ಇರುವುದಿಲ್ಲ ಮತ್ತು ಕ್ಯಾಂಟೀನ್‌ಗಳಲ್ಲಿ ಅಸ್ತಿತ್ವದಲ್ಲಿರುವ ದರಗಳು ಮುಂದುವರಿಯುತ್ತವೆ ಎಂದರು.
”ವಲಯವಾರು ಅಲ್ಪಾವಧಿಯ ಟೆಂಡರ್ ಕರೆಯುವಂತೆ ಕೇಳಿದ್ದೇನೆ. ಟೆಂಡರ್ ಪ್ರಕ್ರಿಯೆ ಬಳಿಕ ಕಾರ್ಯಕ್ರಮವನ್ನು ಮರು ಆರಂಭಿಸುತ್ತೇವೆ. ಅಗತ್ಯವಿರುವ ಕಡೆ ರಿಪೇರಿ ಮಾಡಬೇಕು ಮತ್ತು ಕ್ಯಾಂಟೀನ್‌ಗಳು ಸುಸ್ಥಿತಿಯಲ್ಲಿರಬೇಕು, ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಮತ್ತು ಉತ್ತರ ಕರ್ನಾಟಕದಲ್ಲಿ ಸ್ಥಳೀಯ ಆಹಾರವನ್ನು ಒದಗಿಸಲು ಸೂಚನೆಗಳೊಂದಿಗೆ ನಿಗದಿತ ಮೆನುವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಅವರು ಹೇಳಿದರು.
ಅಧಿಕಾರಿಗಳ ಪ್ರಕಾರ, ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಮಳಿಗೆಗಳ ಸ್ಥಿತಿ ಮತ್ತು ಕಾರ್ಯನಿರ್ವಹಣೆಯ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.
ಸಾರ್ವಜನಿಕ ಸ್ಥಳಗಳಾದ ಕಾಲೇಜುಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ತಾಲೂಕು ಕಚೇರಿಗಳು ಇತ್ಯಾದಿಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚನೆಗಳನ್ನು ನೀಡಲಾಯಿತು.
ಬೆಂಗಳೂರಿನಲ್ಲಿ 175 ಕ್ಯಾಂಟೀನ್‌ಗಳಿದ್ದು, 163 ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕ್ಯಾಂಟೀನ್‌ಗಳು ಉಪಹಾರವನ್ನು 5 ರೂ.ಗೆ ನೀಡುತ್ತವೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತಲಾ 10 ರೂ.ಗೆ ಲಭ್ಯವಾಗಲಿದೆ.