Advertisement
ಪಟ್ಟಣದ ಸಂಚಾರಿ ಪೊಲೀಸರ ನಾಲ್ಕು ತಂಡವು ಏಕಕಾಲದಲ್ಲಿ ರಸ್ತೆಗೆ ಇಳಿದಿದ್ದು ನವೋದಯ ವೃತ್ತ, ಶ್ರೀಕಂಠಯ್ಯವೃತ್ತ, ಮೈಸೂರು ರಸ್ತೆ, ಹಳೆಬಸ್ ನಿಲ್ದಾಣದಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುವವರ ತಡೆದು ಒರ್ವ ಚಾಲಕನಿಗೆ 500 ರೂ. ದಂಡ ಹಾಕಿದಲ್ಲದೆ ಬೈಕ್ ದಾಖಲಾತಿ, ಚಾಲನಾ ಪರವಾನಗಿ, ವಿಮೆ ಸೇರಿದಂತೆ ಇತರ ತಪಾಸಣೆಗಳನ್ನು ಮುಂದಿನ ದಿವಸಗಳಲ್ಲಿ ಮಾಡುವ ಮೂಲಕ ಹೆಚ್ಚುವರಿ ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.
Related Articles
Advertisement
ಸಂಚಾರಿ ಠಾಣೆ ಎಎಸ್‌ಐಗಳಾದ ಪ್ರೇಮರಾಜ್, ರತ್ನಕುಮಾರ್, ಶ್ರೀನಿವಾಸಮೂರ್ತಿ ತಂಡಗಳು ಕಾರ್ಯಚರಣೆ ಮಾಡಿದ್ದು, ಸಾಕಷ್ಟು ಮಂದಿಗೆ ದಂಡ ಹಾಕಿದ್ದಾರೆ. ಈ ವೇಳೆ ಪಿಎಸ್‌ಐ ಬ್ಯಾಟರಾಯಗೌಡ ಮಾತನಾಡಿ, ನಾವು ಏಕಾಏಕಿ ದಂಡ ಹಾಕಲು ಮುಂದಾಗುತ್ತಿಲ್ಲ, ಕಳೆದ 15 ದಿವಸಗಳಿಂದ ನಿರಂತರವಾಗಿ ಪಟ್ಟಣದ ಪ್ರತಿ ವಾರ್ಡಿನಲ್ಲಿ ಆಟೋ ಪ್ರಚಾರ ಮಾಡಿಸಿದ್ದೇವೆ, ಪಟ್ಟಣದ ಪ್ರತಿ ವೃತ್ತದಲ್ಲಿ ಮೈಕ್ ಮೂಲಕ ದಿನದ 24 ತಾಸು ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.
ಏಕಾಏಕಿ ದಂಡ ವಿಧಿಸುತ್ತಿಲ್ಲ- ಸಾಕಷ್ಟು ದಿವಸ ಕಾಲಾವಕಾಶ ನೀಡಲಾಗಿದ್ದು ಜಾಗೃತಿ ಮೂಡಿಸಿದ್ದರೂ ಬೈಕ್ ಸವಾರರು ಹೆಲ್ಮಟ್ ಧರಿಸದ ಹಿನ್ನೆಲೆಯಲ್ಲಿ ದಂಡ ಹಾಕಲು ಮುಂದಾಗುತ್ತಿದ್ದೇವೆ ಹೊರತು ಏಕಾಏಕಿ ದಂಡ ವಿಧಿಸುತ್ತಿಲ್ಲ, ಒಂದು ದಿವಸಕ್ಕೆ ಸೀಮಿತವಾಗದೆ ನಿರಂತರವಾಗಿ ದಂಡ ಹಾಕಲಾಗುವುದು. ತಾಲೂಕಿನ ಪ್ರತಿಯೋರ್ವ ಬೈಕ್ ಸವಾರ ಹೆಲ್ಮಟ್ ಧರಿಸಿ ಬೈಕ್ ಚಾಲನೆ ಮಾಡುವುದರಿಂದ ಅಪಘಾತ ತಡೆಯಬಹುದು ಎಂದು ಪಿಎಸ್‌ಐ ಬ್ಯಾಟರಾಯಗೌಡ ತಿಳಿಸಿದರು.