Advertisement

ಮದ್ಯ ಸೇವಿಸಿ ವಾಹನ ಚಾಲನೆ: ಒಂದೇ ತಿಂಗಳಲ್ಲಿ 250 ಪ್ರಕರಣ ದಾಖಲು

10:19 AM Jul 25, 2019 | Team Udayavani |

ಮಂಗಳೂರು: ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಸಮರ ಸಾರಿದ್ದಾರೆ.

Advertisement

ಜುಲೈ ತಿಂಗಳೊಂದರಲ್ಲೇ ಮದ್ಯ ಸೇವಿಸಿ ವಾಹನ ಚಲಾಯಿಸಿದ 250 ಪ್ರಕರಣಗಳನ್ನು ಪತ್ತೆ ಹಚ್ಚಿ ಕೇಸು ದಾಖಲಿಸಲಾಗಿದೆ. ಮಿತಿಮೀರಿದ ವೇಗ ಹಾಗೂ ಅಜಾಗರೂಕತೆಯ ಚಾಲನೆ ವಿರುದ್ಧ 90 ಪ್ರಕರಣಗಳು ಹಾಗೂ ಚಾಲನೆ ವೇಳೆ ಮೊಬೈಲ್‌ ಬಳಸಿದ 250 ಪ್ರಕರಣಗಳು ದಾಖಲಾಗಿವೆ.

ರೆಡ್‌ ಸಿಗ್ನಲ್‌ ಜಂಪ್‌ ಮಾಡಿದವರ ವಿರುದ್ಧ 170 ಪ್ರಕರಣಗಳು ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚುವರಿ ಪ್ರಯಾಣಿಕರ ಸಾಗಿಸಿದ ಆರೋಪದಲ್ಲಿ 300 ಪ್ರಕರಣಗಳು ದಾಖಲಾಗಿವೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next