Advertisement
ಹೆರಿಗೆಗಾಗಿ ತೆರಳಿದ ಕಾರಣಕ್ಕೆ ತನ್ನನ್ನು ಸೇವೆಯಿಂದ ವಜಾಗೊಳಿಸಿದ ಪೌರಾಡಳಿತ ನಿರ್ದೇಶನಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಗುತ್ತಿಗೆ ಆಧಾರದಲ್ಲಿ ಯೋಜನ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ನಿವಾಸಿ ಬಿ.ಎಸ್. ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ| ಎಂ. ನಾಗಪ್ರಸನ್ನ ಅವರು ಈ ಆದೇಶ ಹೊರಡಿಸಿದ್ದಾರೆ.
Related Articles
Advertisement
ಪೌರಾಡಳಿತ ನಿರ್ದೇಶನಾಲಯವು ತಾಂತ್ರಿಕ ವಿಭಾಗದ ಎಂಐಎಸ್ ಪರಿಣಿತೆ ಹಾಗೂ ಯೋಜನಾ ಮಾಹಿತಿ ಅಧಿಕಾರಿ ಹುದ್ದೆಗೆ 2009ರಲ್ಲಿ ರಾಜೇಶ್ವರಿ ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿತ್ತು. ಹೆರಿಗೆ ರಜೆ ನೀಡಲು ಕೋರಿ ಅರ್ಜಿದಾರೆ 2019ರ ಜೂ.11ರಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಒಪ್ಪದ ನಿರ್ದೇಶನಾಲಯ, ನೋಟಿಸ್ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಹೆರಿಗೆಗಾಗಿ ಹೋದ ಕಾರಣ ಅರ್ಜಿದಾರೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಆಕೆಯ ಗುತ್ತಿಗೆ ರದ್ದುಪಡಿಸಿದ್ದಲ್ಲದೆ ಸೇವೆಯಿಂದ ವಜಾ ಮಾಡಿ 2019ರ ಆ.29ರಂದು ನಿರ್ದೇಶನಾಲಯ ಆದೇಶ ಹೊರಡಿಸಿತ್ತು.