Advertisement

ಶೃಂಗಾರಗೊಂಡಿವೆ 25 “ಸಖೀ’ಮತಗಟ್ಟೆಗಳು

12:05 AM Apr 18, 2019 | sudhir |

ಉಡುಪಿ: ಮಹಿಳಾ ಮತದಾರರನ್ನು ಆಕರ್ಷಿಸಲು ಉಡುಪಿ ಜಿಲ್ಲೆಯಲ್ಲಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ 25 ಸಖೀ ಮತಗಟ್ಟೆಗಳು ಸಿದ್ಧಗೊಡಿದ್ದು ಮದುವೆ ಮನೆಗಳಂತೆ ಕಂಗೊಳಿಸುತ್ತಿವೆ.

Advertisement

ಸಖೀ ಮತಗಟ್ಟೆಗಳನ್ನು ಆಕರ್ಷಕ ಬಟ್ಟೆಯ ಬಣ್ಣಗಳಿಂದ ಶೃಂಗಾರಗೊಳಿಸಲಾಗಿದೆ. ಮತಗಟ್ಟೆಯಲ್ಲಿ ಮ್ಯಾಟ್‌ ಅಳವಡಿಕೆ ಜತೆಗೆ ಮೇಜು ಮತ್ತು ಕುರ್ಚಿಗಳನ್ನು ಕೂಡ ಅಲಂಕರಿಸಲಾಗಿದೆ. ಮತಗಟ್ಟೆಯ ಗೋಡೆಯ ಮೇಲೆ ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಅಳವಡಿಸಲಾಗಿದೆ. ಮತಗಟ್ಟೆಯ ಹೊರಗೆ ಶಾುಯಾನ ಮೂಲಕ ನೆರಳಿನ ವ್ಯವಸ್ಥೆ ಮಾಡಿದ್ದು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆರೋಗ್ಯ ಸಿಬಂದಿಯನ್ನೂ ನೇಮಿಸಲಾಗಿದೆ.

ಚಿಣ್ಣರ ಅಂಗಳ, ಸೆಲ್ಫಿ ಸೆಂಟರ್‌
ಮತದಾನ ಮಾಡುವ ಮಹಿಳೆಯರ ಜತೆಗೆ ಬರುವ ಮಕ್ಕಳಿಗೆ ಆಟವಾಡಲು ಚಿಣ್ಣರ ಅಂಗಳ ತೆರೆಯಲಾಗಿದೆ. ಈ ಅಂಗಳದಲ್ಲಿ ಮಕ್ಕಳಿಗಾಗಿ ಆಟವಾಡಲು ವಿವಿಧ ಆಟಿಕೆಗಳನ್ನು ಇಡಲಾಗಿದೆ. ಅಲ್ಲದೆ ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಸಖೀ ಸೆಲ್ಫಿ ಸೆಂಟರ್‌ ಇದೆ. ಇಲ್ಲಿರುವ ಮತದಾನ ಜಾಗೃತಿಯ ಕೊಡೆಯ ಜತೆ ಮಹಿಳಾ ಮತದಾರರು ಸೆಲ್ಫಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರ ನಿರ್ದೇಶನದಲ್ಲಿ ಉಡುಪಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌ ಮತ್ತು ಜಿಲ್ಲಾ ಪಂಚಾಯತ್‌ ನ ಯೋಜನಾ ನಿರ್ದೇಶಕಿ ನಯನಾ ಅವರು ಈ “ಸಖೀ’ ಮತಗಟ್ಟೆಗಳ ನಿರ್ವಹಣೆಯ ಉಸ್ತುವಾರಿ ವಹಿಸಿದ್ದಾರೆ. ಮಹಿಳಾ ಪೊಲೀಸರೇ ಇಂಥ ಮತಗಟ್ಟೆಗಳ ಭದ್ರತೆ ನೋಡಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next