Advertisement

ಹೈ-ಕ ಭಾಗದ ಶೇ.25 ಮಕ್ಕಳಿಗೆ ಅಪೌಷ್ಟಿಕತೆ!

03:15 AM May 27, 2019 | Sriram |

ಕಲಬುರಗಿ: ಹೈದ್ರಾಬಾದ್‌-ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಪೆಡಂಭೂತವಾಗಿ ಕಾಡುತ್ತಿದೆ. ಈ ಪ್ರದೇಶದ ಆರು ಜಿಲ್ಲೆಗ ಳಲ್ಲಿ ಶೇ.25ರಷ್ಟು ಮಕ್ಕಳು ಅಪೌಷ್ಟಿಕತೆ ಯಿಂದ ನರಳುತ್ತಿದ್ದು, ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಮಕ್ಕಳ ಆರೋಗ್ಯ ಸುಧಾರಣೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ತಗ್ಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಕಸರತ್ತು ನಡೆಸುತ್ತಿವೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಿ ಅವರನ್ನು ಸಬಲರ ನ್ನಾಗಿಸಲು ಹಲವು ಮಹತ್ವಾಕಾಂಕ್ಷಿ ಯೋಜನೆಗಳ ಹೆಸರಲ್ಲಿ ಕೋಟ್ಯಂತರ ರೂ.ಗಳನ್ನು ವ್ಯಯಿಸುತ್ತಿವೆ. ಆದರೆ, ಅಪೌಷ್ಟಿಕತೆಯುಳ್ಳ ಮಕ್ಕಳಲ್ಲಿ ಪರಿಣಾಮ ಕಾರಿ ಬದಲಾವಣೆ ಮಾತ್ರ ಕಂಡು ಬರು ತ್ತಿಲ್ಲ. ಅದರಲ್ಲೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಹೈ-ಕ ಭಾಗ ದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದೆ.

ಕೊಪ್ಪಳ ಪ್ರಥಮ: ಅಪೌಷ್ಟಿಕ ಮಕ್ಕಳ ಅನುಪಾತದಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಬೀದರ ಜಿಲ್ಲೆ ಎರಡನೇ ಮತ್ತು ರಾಯಚೂರು ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಯಾದಗಿರಿ, ಕಲಬುರಗಿ, ಬಳ್ಳಾರಿ ಜಿಲ್ಲೆಗಳು ಕ್ರಮವಾಗಿ 4, 5 ಮತ್ತು 6ನೇ ಸ್ಥಾನದಲ್ಲಿವೆ. ಈ ಆರು ಜಿಲ್ಲೆಗಳಲ್ಲಿ ಪ್ರಸಕ್ತ ಮಾರ್ಚ್‌ ತಿಂಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ತೂಕ ಮಾಡಿ ದಾಗ ಶೇ.25ರಷ್ಟು ಮಕ್ಕಳು ಕಡಿಮೆ ತೂಕ ಇರುವುದು ಕಂಡು ಬಂದಿದೆ. ಅಂದರೆ, ಒಟ್ಟಾರೆ ಆರೂ ಜಿಲ್ಲೆಗಳಲ್ಲಿ 9,54,555 ಮಕ್ಕಳನ್ನು ತೂಕ ಮಾಡಲಾಗಿದ್ದು, ಇದರಲ್ಲಿ 2,39,101 ಮಕ್ಕಳ ತೂಕ ಕಡಿಮೆ ಇರುವುದು ದಾಖಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 39,333 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿ ದ್ದಾರೆ. ಈ ಪೈಕಿ 20,210 ಮಕ್ಕಳು ಮೂರು ವರ್ಷದೊಳಗಿನ ಮತ್ತು ಮೂರರಿಂದ ಆರು ವರ್ಷದೊಳಗಿನ 18,087 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಇದರಲ್ಲಿ 1,036 ಮಕ್ಕಳ ಆರೋಗ್ಯ ಕ್ಷೀಣಿಸಿದ್ದು, ಸ್ಥಿತಿ ಗಂಭೀರವಾಗಿದೆ. ಬಾಲಕರ ಸಂಖ್ಯೆಗಿಂತ ಬಾಲಕಿಯರೇ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿಯಿಂದ ಗೊತ್ತಾಗಿದೆ.

ಕೈಗೊಂಡ ಕ್ರಮವೇನು?: ಅಪೌಷ್ಟಿಕತೆ ತೊಲಗಿಸಲು ಆರು ತಿಂಗಳ ಮಗುವಿ ನಿಂದ ಆರು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯದ ರಕ್ಷಣೆ ಮೇಲೆ ಹೆಚ್ಚು ಕೇಂದ್ರೀಕರಿಸಿ ಪೌಷ್ಟಿಕಾಂಶ ಒದಗಿಸುವ ಕಾರ್ಯ ಆಗುತ್ತಿದೆ. ಇದಕ್ಕಾಗಿ ಕ್ಷೀರಭಾಗ್ಯ, ಮಾತೃವಂದನಾ, ಮಾತೃಶ್ರೀ, ಮಾತೃಪೂರ್ಣ, ಜನನಿ ಸುರಕ್ಷಾ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಂಗನವಾಡಿ ಕೇಂದ್ರಗಳು ಮತ್ತು ಶಾಲೆ ಗಳ ಮುಖಾಂತರ ಹಾಗೂ ಮನೆ ಬಾಗಿಲಿಗೆ ಸರ್ಕಾರದ ಕಾರ್ಯಕರ್ತೆ ಯರನ್ನು ಕಳುಹಿಸುವ ಮೂಲಕ ಪೌಷ್ಟಿಕತೆ ಒದಗಿಸಲಾಗುತ್ತಿದೆ.

Advertisement

ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಶ್ರಮಿಸಲಾಗುತ್ತಿದೆ. ಕೆಲವು ಮಕ್ಕಳಲ್ಲಿ ಅನುವಂಶಿ ಯವಾಗಿಯೂ ಅಪೌಷ್ಟಿಕತೆ ಕಂಡು ಬರುತ್ತಿದೆ.ಅಂಗನವಾಡಿ ಕ್ಷೇತ್ರದಲ್ಲಿ ಪ್ರತಿ ತಿಂಗಳು ಮಕ್ಕಳ ತೂಕ ಮಾಡಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.
– ಮಲ್ಲಿಕಾರ್ಜುನ ರೆಡ್ಡಿ,
ಉಪನಿರ್ದೇಶಕರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆ, ಕಲಬುರಗಿ

-ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next