Advertisement

2 ತಿಂಗಳಲ್ಲಿ ಕಣಿವೆ ರಾಜ್ಯದಲ್ಲಿ 25 ಉಗ್ರರ ಹತ್ಯೆ

10:18 AM Feb 24, 2020 | Team Udayavani |

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರಗಾ ಮಿಗಳ ಸಂಖ್ಯೆ ಕಡಿಮೆ ಯಾಗುತ್ತಿದ್ದು, ಪ್ರಸಕ್ತ ವರ್ಷ ನಡೆದ 12 ಕಾರ್ಯಾಚರಣೆ ಗಳಲ್ಲಿ 25 ಉಗ್ರರನ್ನು ಹತ್ಯೆಗೈದಿರುವುದಾಗಿ ಜಮ್ಮು ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ.

Advertisement

ನಾವು ಮಾಡಿರುವ ಪಟ್ಟಿ ಪ್ರಕಾರ, ಕಾಶ್ಮೀರದಲ್ಲೀಗ 250ಕ್ಕೂ ಕಡಿಮೆ ಉಗ್ರರು ಮಾತ್ರ ಸಕ್ರಿಯರಾಗಿ ಉಳಿದುಕೊಂಡಿದ್ದಾರೆ. ಈ ಎರಡು ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ 10, ಜಮ್ಮು ಪ್ರಾಂತ್ಯದಲ್ಲಿ 2 ಸೇರಿ, ಒಟ್ಟು 12 ಯಶಸ್ವಿ ಕಾರ್ಯಾ ಚರಣೆಗಳನ್ನು ಭದ್ರತಾ ಪಡೆಗಳು ನಡೆಸಿ, 25 ಉಗ್ರರನ್ನು ಕೊಂದು, 9 ಮಂದಿಯನ್ನು ಬಂಧಿಸ ಲಾಗಿದೆ. ಹಾಗೇ ಈ ವರ್ಷ ಇಬ್ಬರು ಉಗ್ರಗಾಮಿಗಳು ಅಂತಾ ರಾಷ್ಟ್ರೀಯ ಗಡಿರೇಖೆ ಮೂಲಕ ರಾಜ್ಯದ ಒಳಗೆ ನುಸುಳಿದ್ದಾರೆ. ಈ ಪೈಕಿ ಇತ್ತೀಚೆಗೆ ಟ್ರಾಲ್‌ ಪ್ರಾಂತ್ಯದಲ್ಲಿ ನಡೆದ ಕಾರ್ಯಾಚರಣೆ ವೇಳೆ ಓರ್ವ ಜೆಇಎಂ ಉಗ್ರನನ್ನು ಹತ್ಯೆಗೈಯ ಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇಬ್ಬರು ಲಷ್ಕರ್‌ ಉಗ್ರರ ಹತ್ಯೆ: ಶನಿವಾರ ಇಲ್ಲಿನ ಅನಂತ್‌ನಾಗ್‌ ಜಿಲ್ಲೆ ಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್‌ ಉಗ್ರರನ್ನು ಹೊಡೆ ದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next