ಹೊಸದಿಲ್ಲಿ: ಕೋವಿಡ್ ಕಾರಣ ಒಂದೂವರೆ ವರ್ಷದಿಂದ ಕಳೆ ಗುಂದಿದ್ದ ಅದ್ದೂರಿ ವಿವಾಹ ಸಮಾರಂಭಗಳು ಮುಂದಿನ ದಿನಗಳಲ್ಲಿ ತಮ್ಮ ವಿಜೃಂಭಣೆಯನ್ನು ಮತ್ತೆ ಮೈಗೂಡಿಸಿಕೊಳ್ಳ ಲಿದ್ದು, ನ. 14ರಿಂದ ಡಿ. 13ರ ನಡುವಣ ಒಂದು ತಿಂಗಳ ಅವಧಿಯಲ್ಲಿ ಇಂಥ 25 ಲಕ್ಷ ಮದುವೆಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.
ಅಖಿಲ ಭಾರತೀಯ ವರ್ತಕರ ಒಕ್ಕೂಟ (ಸಿಎಐಟಿ) ಈ ನಿರೀಕ್ಷೆ ವ್ಯಕ್ತಪಡಿಸಿದ್ದು, ಈ ವಿವಾಹಗಳಿಂದಾಗಿ 3 ಲಕ್ಷ ಕೋಟಿ ರೂ.ಗಳಷ್ಟು ವ್ಯಾಪಾರ ವಹಿವಾಟು ನಡೆಯಲಿದೆ ಎಂದು ಹೇಳಿದೆ.
ರಾಜಧಾನಿ ದಿಲ್ಲಿಯೊಂದರಲ್ಲೇ 1.5 ಲಕ್ಷ ವಿವಾಹ ಸಮಾರಂಭಗಳು ನಡೆದು 50 ಸಾವಿರ ಕೋ.ರೂ.ಗಳ ವ್ಯವಹಾರ ಸೃಷ್ಟಿಸಲಿವೆ ಎಂದು ಸಿಎಐಟಿ ತಿಳಿಸಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಪಾಕಿಸ್ಥಾನವನ್ನು ಹೊರದಬ್ಬಿದ ಆಸ್ಟ್ರೇಲಿಯ
ಕಲ್ಯಾಣ ಮಂಟಪಗಳು, ಹೊಟೇಲ್‌ಗಳು, ತೆರೆದ ಉದ್ಯಾನಗಳು, ಫಾರ್ಮ್ ಹೌಸ್‌ಗಳು ಮತ್ತಿತರ ಸ್ಥಳಗಳು ದೇಶಾದ್ಯಂತ ಇಂತಹ ವಿವಾಹ ಸಮಾರಂಭಗಳಿಗಾಗಿ ಸಿದ್ಧವಾಗಿವೆ ಎಂದು ಸಿಎಐಟಿ ಹೇಳಿದೆ.