ಮಂಗಳೂರು: ಎಲೆ ಹಳದಿ ರೋಗದಿಂದ ಅಡಿಕೆ ತೋಟ ನಾಶ ಹೊಂದಿದವರಿಗೆ ಮತ್ತು ಪರ್ಯಾಯ ಬೆಳೆ ಅಳವಡಿಸಿಕೊಳ್ಳಲು ಒಂದು ಬಾರಿಯ ಪರಿಹಾರವಾಗಿ ಬಜೆಟ್ ನಲ್ಲಿ 25 ಕೋಟಿ ರೂ. ಪ್ಯಾಕೇಜ್ ಘೋಷಿಸಬೇಕು; ಎಲೆ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋ ಧನೆಗೆ ನಿರ್ದೇಶನ ನೀಡ ಬೇಕು ಎಂದು ಸಚಿವರು ಮತ್ತು ಶಾಸಕರನ್ನು ಒಳ ಗೊಂಡ ನಿಯೋಗವು ಸಿಎಂ ಯಡಿಯೂರಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
ಸಚಿವರಾದ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಆರ್. ಶಂಕರ್ ಅವರ ನೇತೃತ್ವದಲ್ಲಿ ಕರಾವಳಿ, ಮಲೆ ನಾಡಿನ ಶಾಸಕರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿತು.
ನೆರವು ಅಗತ್ಯ :
ಕರಾವಳಿ – ಮಲೆನಾಡು ಭಾಗದಲ್ಲಿ ಎಲೆ ಹಳದಿ ರೋಗ ದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ದ್ದಾರೆ. ಅವರಿಗೆ ನೆರವಿನ ಆವಶ್ಯಕತೆ ಇದೆ. ಪರ್ಯಾಯ ಬೆಳೆ ಗಳ ಮೊರೆ ಹೋಗುವ ಅನಿ ವಾರ್ಯ ಸೃಷ್ಟಿ ಯಾಗಿದೆ. ಪರ್ಯಾಯ ಕೃಷಿಗೆ ದೀರ್ಘಾವಧಿ ಸಾಲ ಮಂಜೂರು ಮಾಡಬೇಕು. ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಅಡಿಕೆಗೆ ಹಳದಿ ರೋಗದಿಂದ ಬಾಧಿತರಾದ ರೈತರ ಸಾಲ ಮನ್ನಾ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಲಾಗಿದೆ. ಸಿಎಂ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಅಂಗಾರ ತಿಳಿಸಿದ್ದಾರೆ.
ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ, ರಾಜೇಶ್ ನಾಯ್ಕ, ಕೆ.ಜಿ. ಬೋಪಯ್ಯ, ಆರಗ ಜ್ಞಾನೇಂದ್ರ ನಿಯೋಗದಲ್ಲಿದ್ದರು.