Advertisement

ಕಾಪು ಕ್ಷೇತ್ರದ ಅಭಿವೃದ್ಧಿಗಾಗಿ 25 ಕೋಟಿ ರೂ.: ಲಾಲಾಜಿ

11:10 PM Sep 24, 2019 | Team Udayavani |

ಪಡುಬಿದ್ರಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಪು ಕ್ಷೇತ್ರದ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನವನ್ನು ನೀಡಿರುತ್ತಾರೆ. ಇನ್ನುಳಿದಂತೆ ಕ್ಷೇತ್ರದ ಶಾಸಕನಾಗಿ ವಿವಿಧ ಅನುದಾನವನ್ನು ಬಳಸಿಕೊಂಡು ಗ್ರಾಮದ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಅವರು ಸೆ.24ರಂದು ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಬಡಾಗ್ರಾಮ ಪಂಚಾಯತ್‌ ಇದರ 2019-20ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ ಮಾತನಾಡಿದರು.

ಕಾಪು ಪುರಸಭೆಗೆ ಸೇರ್ಪಡೆೆಗೊಳಿಸುವ ಬಗ್ಗೆ ಗ್ರಾಮಸ್ಥರಿಗೆ ಮತ್ತಷ್ಟು ಅನ್ಯಾಯ ಆಗಬಾರದು. ಆ ನಿಟ್ಟಿನಲ್ಲಿ ಸಾಧಕ, ಬಾಧಕದ ಬಗ್ಗೆ ಚರ್ಚಿಸಲು ವಿಶೇಷ ಗ್ರಾಮಸಭೆಯನ್ನು ಕರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ನಿರ್ಣಯ ಕೈಗೊಳ್ಳಲಾಯಿತು.

ಇನ್ನುಳಿದಂತೆ ಸೂಕ್ತವಾಗಿ ತ್ಯಾಜ್ಯ ಸಂಗ್ರಹ, ಗಿಡಗಂಟಿ ಕಟಾವು, ಬೀದಿ ದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸುವಂತೆ ಒತ್ತಾಯಿಸಿದ ಗ್ರಾಮಸ್ಥರು, ತುಕ್ಕು ಹಿಡಿದ ವಿದ್ಯುತ್‌ ತಂತಿ, ನೇತುಬೀಳುವ ವಿದ್ಯುತ್‌ ತಂತಿ ಬದಲಾಯಿಸುವಂತೆ ಮೆಸ್ಕಾಂ ಅಧಿಕಾರಿಗೆ ಆಗ್ರಹಿಸಿದ್ದು, ಕೇವಲ ಪುಸ್ತಕದಲ್ಲಿ ಬರೆದದ್ದನ್ನು ಕಾರ್ಯ ರೂಪಕ್ಕೆ ತರುವಂತೆ ಆಗ್ರಹಿಸಿದರು.

ನಗರಾಭಿವೃದ್ಧಿ ಅಧಿಕಾರಿ ಒಂದು ದಿನವಾದರೂ ಸಂಪೂರ್ಣವಾಗಿ ಸಮರ್ಪಕವಾಗಿ ಕರ್ತವ್ಯ ನಿಭಾಯಿಸುವಂತೆ ವ್ಯವಸ್ಥೆ ಕಲ್ಪಿಸಲು ಶಾಸಕರಲ್ಲಿ ಕೋರಿಕೊಂಡರು. ಎರ್ಮಾಳುನಲ್ಲಿ ತಡೆರಹಿತ ಬಸ್ಸು ನಿಲುಗಡೆಯನ್ನು ಕಡ್ಡಾಯಗೊಳಿಸುವಂತೆ ಬಂದ ಅರ್ಜಿಯನ್ನು ಸಭೆಗೆ ತಿಳಿಸಲಾಯಿತು. ಬಡಾ ಎರ್ಮಾಳಿನಲ್ಲಿ ಕೆಪಿಎಸ್‌ ಶಾಲೆ ಆರಂಭಿಸಲು ಒತ್ತಾಯ ಕೇಳಿ ಬಂದಿತ್ತು.

Advertisement

ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಬಿ.ಬಿ.ರಾವ್‌ ಇಲಾಖಾ ಮಾಹಿತಿ ನೀಡುತ್ತಾ, ಮಧುಮೇಹ, ರಕ್ತದೊತ್ತಡದ ಔಷಧಿಗಳ ಸರಬರಾಜು ಕುಂಠಿತವಾಗಿದೆ. ಇನ್ಸುಲಿನ್‌ ಬಂದಿಲ್ಲ, ಹೆಚ್ಚುವರಿ ಅನುದಾನಕ್ಕೆ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ. 1 ಮಲೇರಿಯಾ ವರದಿಯಾಗಿದೆ. 30 ಸಿಬಂದಿ, 2 ವೈದ್ಯಾಧಿಕಾರಿ ಇರುವಲ್ಲಿ 14ರಷ್ಟು ಸಿಬಂದಿ ಓರ್ವ ವೈದ್ಯಾಧಿಕಾರಿ ಕರ್ತವ್ಯ ನಿಭಾಯಿಸುತ್ತಿದ್ದು, ಸಿಬಂದಿ ಕೊರತೆ ನೀಗಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೆಸ್ಕಾಂ ಅಧಿಕಾರಿಗಳಾದ ಸತೀಶ್‌ ಕೆ., ರಮೇಶ್‌, ತೋಟಗಾರಿಕಾ ಇಲಾಖೆಯ ಶ್ವೇತಾ ಹಿರೇಮs…, ಕೃಷಿ ಇಲಾಖೆಯ ಎಂ.ವಾದಿರಾಜ ರಾವ್‌, ಶಿಕ್ಷಣ ಸಂಯೋಜಕ ಶಂಕರ ಸುವರ್ಣ, ಸಿಡಿಪಿಒ ಅಂಗನವಾಡಿ ಮೇಲ್ವಿಚಾರಕಿ ಶಕುಂತಳಾ ಇಲಾಖಾ ಮಾಹಿತಿಯನ್ನು ನೀಡಿದರು.

ತಾಲೂಕು ಪಂಚಾಯತ್‌ ಇ.ಒ. ಕೇಶವ ಶೆಟ್ಟಿಗಾರ್‌ ನೋಡಲ್‌ ಅಧಿಕಾರಿಯಾಗಿದ್ದರು. ಬಡಾ ಗ್ರಾ.ಪಂ. ಅಧ್ಯಕ್ಷೆ ಶರ್ಮಿಳಾ ಡಿ. ಸಾಲ್ಯಾನ್‌ ಅಧ್ಯಕ್ಷತೆ ವಹಿಸಿದ್ದರು.

ತಾ.ಪಂ. ಸದಸ್ಯ ಯು.ಸಿ. ಶೇಕಬ್ಬ, ಗ್ರಾ.ಪಂ.ಉಪಾಧ್ಯಕ್ಷೆ ಇಂದಿರಾ ಎಸ್‌.ಶೆಟ್ಟಿ, ಪಶು ಸಂಗೋಪನಾ ಅಧಿಕಾರಿ ವಸಂತ ಎಚ್‌., ಪಡುಬಿದ್ರಿ ಪ್ರೊಬೇಷನರಿ
ಪಿ.ಎಸ್‌.ಐ. ಸದಾಶಿವ್‌ ಗೋರೋಜಿ, ಎ.ಎಸ್‌.ಐ. ಸುದೇಶ್‌ ಶೆಟ್ಟಿ, ಗ್ರಾ.ಪಂ. ಸದಸ್ಯರು ವೇದಿಕೆಯಲ್ಲಿದ್ದರು.

ಲೆಕ್ಕ ಸಹಾಯಕಿ ನಿರ್ಮಲಾ ಶೆಟ್ಟಿ ಸ್ವಾಗತಿಸಿದರು. ಪಂಚಾಯತ್‌ ಪಿ.ಡಿ.ಒ. ಕುಶಾಲಿನೀ ವಿ.ಎಸ್‌. ಅನುಪಾಲನಾ ವರದಿ ನೀಡಿದರು.

ಸಿಬಂದಿ ಚಂದ್ರಾವತೀ ವಿ.ಆಚಾರ್ಯ ವರದಿ ವಾಚಿಸಿದರು. ಕಾರ್ಯದರ್ಶಿ ಪೂರ್ಣಿಮಾ ಎಂ.ಬಂಗೇರ ವಂದಿಸಿದರು. ಸಿಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next