Advertisement

ಹಾಪ್‌ಕಾಪ್ಸ್‌ ಅಭಿವೃದ್ಧಿಗೆ 25 ಕೋಟಿ ಸಾಲ

12:39 AM Feb 20, 2020 | Lakshmi GovindaRaj |

ಬೆಂಗಳೂರು: ಹಾಪ್‌ಕಾಮ್ಸ್‌ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ 25 ಕೋಟಿ ರೂ. ದೀರ್ಘಾವಧಿ ಸಾಲ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗು ವುದು ಎಂದು ತೋಟಗಾರಿಕೆ ಸಚಿವ ನಾರಾಯಣ ಗೌಡ ಭರವಸೆ ನೀಡಿದ್ದಾರೆ.

Advertisement

ಲಾಲ್‌ಬಾಗ್‌ನಲ್ಲಿರುವ ಹಾಪ್‌ಕಾಮ್ಸ್‌ ಪ್ರಧಾನ ಕಚೇರಿ ಆವರಣದಲ್ಲಿ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ಆಯೋಜಿಸಿರುವ “ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ’ ಉದ್ಘಾಟಿಸಿ ಮಾತನಾಡಿದ ಅವರು, ಹಾಪ್‌ಕಾಮ್ಸ್‌ 10 ಸಾವಿರಕ್ಕೂ ಅಧಿಕ ನೊಂದಾಯಿತ ರೈತ ಸದಸ್ಯರನ್ನು ಹೊಂದಿದೆ.

ಇದರ ಇನ್ನಷ್ಟು ಅಭಿವೃದ್ಧಿಗಾಗಿ ಹಿಂದಿನ ತೋಟಗಾರಿಕೆ ಸಚಿವ ವಿ.ಸೋಮಣ್ಣ ಅವರ ಮುಖೇನ 25 ಕೋಟಿ ರೂ. ದೀರ್ಘಾವಧಿ ಸಾಲದ ಪ್ರಸ್ತಾವನೆ ಇಡಲಾಗಿತ್ತು ಎಂದು ತಿಳಿದುಬಂದಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಾರಿಯ ಬಜೆಟ್‌ನಲ್ಲಿ ದೀರ್ಘಾವಧಿ ಸಾಲ ಘೋಷಣೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.

ಈ ದೀರ್ಘಾವಧಿ ಸಾಲದಿಂದ ರಾಜ್ಯದ ವಿವಿಧೆಡೆ ಹಾಪ್‌ಕಾಮ್ಸ್‌ ಮಳಿಗೆಗಳನ್ನು ತೆರೆಯಲಾಗುವುದು. ಜತೆಗೆ ಮೂಲಸೌಕರ್ಯ ಒದಗಿಸಿ ಹೆಚ್ಚು ರೈತರನ್ನು ಹಾಗೂ ಗ್ರಾಹಕರು ಹಾಪ್‌ಕಾಮ್ಸ್‌ನತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಪ್ರಸ್ತುತ ಬೆಂಗಳೂರಿನಲ್ಲಿ 198 ಮಳಿಗೆಗಳಿದ್ದು, ಕೆಲವೆಡೆ ಕಟ್ಟಡ ಕೊರತೆ ಹಾಗೂ ಹಣಕಾಸಿನ ಸಮಸ್ಯೆಯಿಂದ ಮಳಿಗೆಗಳನ್ನು ಮುಚ್ಚಿದ್ದು, ಅವುಗಳ ಪುನರ್‌ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಹಾಪ್‌ಕಾಮ್ಸ್‌ ಮೂಲಕ ರೈತರಿಗೆ ಬೆಂಬಲ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣು, ತರಕಾರಿ ತಲುಪುತ್ತಿವೆ. ಇದೇ ರೀತಿ ಮಂಡ್ಯ ಮತ್ತು ಹಳೆ ಮೈಸೂರು ಭಾಗದಲ್ಲೂ ಹಾಪ್‌ಕಾಮ್ಸ್‌ ಮಳಿಗೆ ವಿಸ್ತರಿಸಬೇಕು. ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅಲ್ಲಿನ ರೈತರಿಗೆ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಮತ್ತು ಹಾಪ್‌ಕಾಮ್ಸ್‌ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್‌, ಹಾಪ್‌ಕಾಮ್ಸ್‌ ಅಧ್ಯಕ್ಷ ಎಸ್‌.ಚಂದ್ರೇಗೌಡ, ಉಪಾಧ್ಯಕ್ಷ ಬಿ.ಮುನೇ ಗೌಡ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌.ಪ್ರಸಾದ್‌ ಸೇರಿದಂತೆ ಮತ್ತಿರರರಿದ್ದರು.

ಮಾರ್ಚ್‌ ತಿಂಗಳ ಅಂತ್ಯದವರೆಗೂ ಮೇಳ: ಫೆ.19ರಿಂದ ಆರಂಭವಾಗಿರುವ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ, ಮಾರ್ಚ್‌ ತಿಂಗಳ ಅಂತ್ಯದವರೆಗೆ ನಗರದ ಎಲ್ಲಾ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ನಡೆಯಲಿದೆ. ಮೇಳದಲ್ಲಿ 13ರಿಂದ 15 ತಳಿಯ ದ್ರಾಕ್ಷಿಗಳು, 4 ತಳಿಯ ಕಲ್ಲಂಗಡಿ, ವಿವಿಧ ಬಗೆಯ ಖರ್ಜೂರ, ಚಕ್ಕೋತ, ಡ್ರೈಪ್ರೋಟ್‌ಗಳು ಲಭ್ಯವಿವೆ. ಇನ್ನು ಮೇಳದಲ್ಲಿ ದ್ರಾಕ್ಷಿ -ಕಲ್ಲಂಗಡಿ ಖರೀದಿಸುವವರಿಗೆ ಶೇ.10 ರಿಯಾಯಿತಿ ನೀಡಲಾಗುತ್ತಿದೆ.

ಐಷಾರಾಮಿ ಹೋಟೆಲ್‌ಗೆ ಹಣ್ಣು ತರಕಾರಿ ಸರಬರಾಜು: ಬೆಂಗಳೂರಿನಲ್ಲಿರುವ ಐಷರಾಮಿ ಹೋಟೆಲ್‌ಗ‌ಳಿಗೆ ಅಗತ್ಯವಿರುವ ತರಕಾರಿ, ಹಣ್ಣು ಮತ್ತಿತರ ಪದಾರ್ಥಗಳನ್ನು ಹಾಪ್‌ಕಾಮ್ಸ್‌ನಿಂದ ಪೂರೈಸುವ ಚಿಂತನೆ ಇದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಉದ್ಯಮಿಗಳೊಂದಿಗೆ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಸಚಿವ ನಾರಾಯಣ ಗೌಡ ಇದೇ ವೇಳೆ ತಿಳಿಸಿದರು.

ಮೇಳದಲ್ಲಿ ಹಣ್ಣಿನ ದರ
ತಳಿ ದರ
ದ್ರಾಕ್ಷಿ ಬೆಂಗಳೂರು ನೀಲಿ 38 ರೂ.
ಟಿಎಸ್‌ 70 ರೂ.
ಥಾಷ್‌ ಗಣೇಶ್‌ 72 ರೂ.
ಸೊನಿಕಾ 80 ರೂ.
ಸೂಪರ್‌ ಸೊನಿಕಾ 86 ರೂ.
ಸೂಪರ್‌ ಸೊನಿಕಾ(ಬಾಕ್ಸ್‌) 88
ಶರದ್‌ 110 ರೂ.
ಕೃಷ್ಣ ಶರದ್‌ 114 ರೂ.
ಕೃಷ್ಣ ಶರದ್‌ ಸೂಪರ್‌ 160 ರೂ.
ಜಂಬೂ ಶರದ್‌ 160 ರೂ.
ಫ್ಲೇಮ್‌ 160 ರೂ.
ಇಂಡಿಯನ್‌ ರೆಡ್‌ ಗ್ಲೋಬ್‌ 174 ರೂ.
ಒಣದ್ರಾಕ್ಷಿ 300 ರೂ.
ಕಲ್ಲಂಗಡಿ ಕಿರಣ್‌ 18 ರೂ.
ನಾಮಧಾರಿ 20 ರೂ.

Advertisement

Udayavani is now on Telegram. Click here to join our channel and stay updated with the latest news.

Next