Advertisement

ಪಂಜಾಬ್ ನಕಲಿ ಮದ್ಯ ದುರಂತಕ್ಕೆ 86 ಮಂದಿ ಬಲಿ: 25 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

02:12 PM Aug 02, 2020 | keerthan |

ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅಮೃತಸರ್, ಬಟಾಲಾ ಮತ್ತು ತರ್ನ್, ತರನ್ ಜಿಲ್ಲೆಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದ್ದು, ಒಟ್ಟು 86 ಮಂದಿ ನಕಲಿ ಮದ್ಯ ಸೇವನೆಯ ಕಾರಣದಿಂದ ಸಾವನ್ನಪ್ಪಿದ್ದಾರೆ.

Advertisement

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ನ್ಯಾಯಾಂಗ ತನಿಖೆಗೆ ಆದೇಶಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಆರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಅದಲ್ಲದೆ ಮೃತರ ಕುಟುಂಬಗಳಿಗೆ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಬುಧವಾರ ರಾತ್ರಿಯಿಂದ ಪಂಜಾಬ್ ನ ಕೆಲ ಜಿಲ್ಲೆಗಳಲ್ಲಿ ದಿಢೀರ್ ಸರಣಿ ಸಾವುಗಳು ವರದಿಯಾಗಿತ್ತು. ನಕಲಿ ಮದ್ಯ ಸೇವನೆಯೇ ಈ ಸರಣಿ ಸಾವಿಗೆ ಕಾರಣ ಎಂದು ವಿಚಾರಣೆಯಿಂದ ಬೆಳಕಿದೆ ಬಂದಿತ್ತು. ತರ್ನ್ ತರನ್ ಜಿಲ್ಲೆಯಲ್ಲಿ ಇದುವರೆಗೆ 63 ಮಂದಿ ಮೃತಪಟ್ಟರೆ, ಅಮೃತಸರದಲ್ಲಿ 12 ಮಂದಿ, ಮತ್ತು ಬಟಾಲಾದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.

ಅಮೃತಸರ, ಗುರುದಾಸ್ ಪುರ, ತರ್ನ್ ತರನ್ ಜಿಲ್ಲೆಯ ಹಲವೆಡೆಗಳಲ್ಲಿ ಶನಿವಾರ ಪೊಲೀಸರು ದಾಳಿ ನಡೆಸಿದ್ದು, ನಕಲಿ ಮಧ್ಯ ಮಾರಾಟ ಸಂಬಂದ 25 ಜನರನ್ನು ಬಂಧಿಸಲಾಗಿದೆ. ಕೆಲವು ಮಹಿಳಾ ಕಿಂಗ್ ಪಿನ್ ಗಳು, ಸಾರಿಗೆ ಮಾಲಕರು, ವಾಂಟೆಡ್ ಕ್ರಿಮಿನಲ್ ಗಳು, ವಿವಿಧ ಡಾಬಾ ಮಾಲಕರು ಈ ಜಾಲದಲ್ಲಿ ಸೇರಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next