ಪಣಂಬೂರು : ಪಣಂಬೂರು ಪೊಲೀಸ್ ಠಾಣೆಯಲ್ಲಿ ದಿನಾಂಕ 12-07-2021 ರಂದು ವರದಿಯಾಗಿದ್ದ ಮನೆಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಗಿನ ತೂಕೂರು ಎಂಬಲ್ಲಿ ಮನೆಕಳ್ಳತನ ಮಾಡಿ ಚಿನ್ನಾಭರಣ ಸ್ವತ್ತು ಮತ್ತು ನಗದು ಹಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಮೇಲಾಧಿಕಾರಿಗಳ ನಿರ್ದೇಶನದಂತೆ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ನೇತೃತ್ವದ ಪೊಲೀಸ್ ತಂಡ ಪತ್ತೆ ಮಾಡಿ ರೂಪಾಯಿ 11,06,270 ಮೌಲ್ಯದ ಸುಮಾರು 248.600 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದು ಹಣ ಸೇರಿದಂತೆ ಒಟ್ಟು 11,11,270/-ಮೌಲ್ಯದ ಚಿನ್ನಾಭರಣ ಸ್ವತ್ತು ಗಳನ್ನು ಪ್ರಕರಣಕ್ಕೆ ಸಂಬಂದಿಸಿದಂತೆ ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿ ಚಿನ್ನಾಭರಣ ಸ್ವತ್ತುಗಳನ್ನು ಅತೀ ಶೀಘ್ರವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತನು ಪಣಂಬೂರು ಠಾಣಾ ವ್ಯಾಪ್ತಿಯ ಕೆಳಗಿನ ತೂಕೂರು ಎಂಬಲ್ಲಿಯ ನಿವಾಸಿಯಾಗಿರುತ್ತಾನೆ. ಆತನು ಈ ಪ್ರಕರಣದ ದೂರುದಾರರ ಮನೆಯ ನೆರೆಯ ಮನೆಯಲ್ಲಿ ವಾಸವಾಗಿದ್ದು ದೂರುದಾರರ ಮನೆಯಲ್ಲಿ ನಿಕಟಸಂಪರ್ಕಹೊಂದಿದ್ದು ಅನ್ನೋನ್ಯತೆಯಿಂದ ಇದ್ದು ದೂರುದಾರರ ಮನೆಯ ಸದಸ್ಯರ ವಿಶ್ವಾಸಗಳಿಸಿ ಮನೆಯ ವಿಚಾರಗಳನ್ನು ತಿಳಿದುಕೊಂಡು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ದೂರುದಾರರ ಮನೆಯವರು 2 ದಿನ ಮನೆಯಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ಮನೆಯ ಹಂಚನ್ನು ತೆಗೆದು ಒಳಗೆ ಹೋಗಿ ಕಳ್ಳತನ ನಡೆಸಿರುತ್ತಾನೆ ಹಾಗೂ ಆಪಾದಿತನು ಸಾಲಮಾಡಿಕೊಂಡಿದ್ದು ಹಣಕಾಸಿನ ತೊಂದರೆಯಲ್ಲಿದ್ದವನು ಅದೇ ಕಾರಣಕ್ಕಾಗಿ ಕಳ್ಳತನ ನಡೆಸಿರುತ್ತಾನೆ ಎಂಬುದು ಪ್ರಕರಣದ ತನಿಖೆಯಿಂದ ತಿಳಿದುಬಂದಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಶ್ರೀ. ಎನ್. ಶಶಿಕುಮಾರ್, ಐ.ಪಿ.ಎಸ್ ರವರ ನಿರ್ದೇಶನದಂತೆ ಶ್ರೀ ಹರಿರಾಂ ಶಂಕರ್, ಐ.ಪಿ.ಎಸ್, ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರು (ಕಾ&ಸು) ಶ್ರೀ, ದಿನೇಶ್ ಕುಮಾರ್ ಬಾರಿಕೆ, ಪೊಲೀಸ್ ಉಪ-ಆಯುಕ್ತರು(ಅ.ಸಂ) ಮತ್ತು ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಎಸ್. ಮಹೇಶ್ ಕುಮಾರ್ ಇವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಅಝಮತ್ ಆಲಿ, ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಉಮೇಶ್ ಕುಮಾರ್.ಎಂ.ಎನ್ ಮತ್ತು ಶ್ರೀ ಕುಮಾರೇಶನ್, ಪ್ರೋ. ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಮನೋಹರ್ ಪ್ರಸಾದ್ ಹಾಗೂ ಪಣಂಬೂರು ಪೊಲೀಸ್ ಠಾಣಾ ಎ.ಎಸ್.ಐ ಕೃಷ್ಣ ಹಾಗೂ ಸಿಬ್ಬಂಧಿಗಳಾದ ಡೇವಿಡ್ ಡಿ.ಸೋಜಾ, ಕಮಲಾಕ, ಚಂದ್ರಹಾಸ್ ಆಳ್ವಾ, ದಾದಸಾಬ್ ಹಾಗೂ ಇತರರು ಶ್ರಮಿಸಿರುತ್ತಾರೆ.