Advertisement
ಕಬ್ಬಿನ ದರ ನಿಗದಿಪಡಿಸುವುದಕ್ಕೆಸಂಬಂಧಿಸಿದಂತೆ ಸಂಸದರು, ಶಾಸಕರು ಮತ್ತು ಇನ್ನೀತರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಮತ್ತು ವಿವಿಧ ಸಕ್ಕರೆ ಕಾರ್ಖಾನೆಗಳ ನಿರ್ದೇಶಕರು ಮತ್ತುವ್ಯವಸ್ಥಾಪಕರೊಂದಿಗೆ ಸಚಿವರು ಎರಡುಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಚರ್ಚಿಸಿದರು.
Related Articles
Advertisement
ಇದೆ ವೇಳೆ ಶಾಸಕ ರಾಜಶೇಖರ ಪಾಟೀಲಮಾತನಾಡಿ, ಎಲ್ಲ ಜನಪ್ರತಿನಿಧಿಗಳು ಸೇರಿ, ಚರ್ಚಿಸಿ ರೈತರಿಗೆ ನ್ಯಾಯಯುತ ದರ ನೀಡಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ಎಂಎಲ್‌ಸಿ ಅರವಿಂದಕುಮಾರ ಅರಳಿ,ಕೆಎಸ್‌ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ,ಬಿಡಿಎ ಅಧ್ಯಕ್ಷ ಬಾಬು ವಾಲಿ, ಡಿಸಿರಾಮಚಂದ್ರನ್ ಆರ್, ಎಸ್‌ಪಿ ನಾಗೇಶಡಿ.ಎಲ್., ಸಹಾಯಕ ಆಯುಕ್ತರಾದಗರೀಮಾ ಪನ್ವಾರ್, ಭುವನೇಶ ಪಟೇಲ್,ವಿವಿಧ ಸಕ್ಕರೆ ಕಾರ್ಖಾನೆಗಳ ನಿರ್ದೇಶಕರುಮತ್ತು ವ್ಯವಸ್ಥಾಪಕರು, ವಿವಿಧ ರೈತಸಂಘಟನೆಗಳ ಮುಖಂಡರು ಇದ್ದರು
ಸಭೆ ವಿಳಂಬಕ್ಕೆ ರೈತರ ಆಕ್ರೋಶ :
ರೈತ ಮುಖಂಡರನ್ನು ಹೊರಗಿಟ್ಟು ಕಬ್ಬಿನ ದರ ನಿಗದಿ ಸಂಬಂಧ ಸಭೆಯನ್ನು ನಡೆಸಿದ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ನಡೆಗೆ ಜಿಲ್ಲಾ ರೈತ ಸಂಘದ ಎರಡು ಬಣಗಳು ಆಕ್ರೋಶ ವ್ಯಕ್ತಪಡಿಸಿದವು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬೆ.11ಕ್ಕೆ ಸಭೆ ನಿಗದಿಯಾಗಿದ್ದು, ರೈತ ಸಂಘದ ಪ್ರಮುಖರಲ್ಲರೂ ಸಮಯಕ್ಕೆ ಆಗಮಿಸಿದ್ದರು. ಆದರೆ, ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಜನಪ್ರತಿನಿ ಧಿಗಳು ಮತ್ತು ಕಾರ್ಖಾನೆ ಮುಖ್ಯಸ್ಥರ ಸಭೆ ಪ್ರತ್ಯೇಕವಾಗಿ ನಡೆಸಿದ್ದರು. ಮಧ್ಯಾಹ್ನ 2 ಗಂಟೆವರೆಗೆ ಯಾರೊಬ್ಬರು ಸಭಾಂಗಣಕ್ಕೆ ಬಾರದ ಹಿನ್ನೆಲೆ ಕೆರಳಿದ ರೈತರು ಸರ್ಕಾರ, ಕಾರ್ಖಾನೆ ಆಡಳಿತ ಮಂಡಳಿಗಳ ವಿರುದ್ಧ ಧಿ ಕ್ಕಾರಕೂಗಿದರು. ಕಬ್ಬು ಬೆಳೆದು ನಮ್ಮ ಬಾಯಿ ಕಹಿ ಆಗಿದೆ. ಸಭೆಯಿಂ ಸಿಹಿ ಸಿಗುತ್ತದೆ ಎಂಬ ಆಸೆ ಹೊತ್ತು ಬಂದಿದ್ದೇವೆ. ಆದರೆ, ಮೂರು ಗಂಟೆ ಕಾಲ ರೈತರನ್ನು ಕಡೆಗಣಿಸಲಾಗಿದೆ. ಮೊದಲೇ ಕಾರ್ಖಾನೆ ಪ್ರಮುಖರ ಜತೆ ಚರ್ಚಿಸಿ ಸಭೆ ಕರೆಯಬಹುದಿತ್ತು ಎಂದು ಕಿಡಿಕಾರಿದರು.