Advertisement

24 ವರ್ಷ 101 ಬಾರಿ ಬೈಗುಳ: ವಿಪಕ್ಷಗಳ ಕುರಿತು ಪಿಎಂ ಮೋದಿ ಹೇಳಿದ್ದೇನು?

12:19 AM May 29, 2024 | Team Udayavani |

ಹೊಸದಿಲ್ಲಿ: ಕಳೆದ 24 ವರ್ಷಗಳಲ್ಲಿ ನಿರಂತರವಾಗಿ ನಿಂದನೆಗಳನ್ನು ಎದುರಿಸುತ್ತಾ ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನನ್ನನ್ನು ಸಾವಿನ ವ್ಯಾಪಾರಿ, ಕ್ರಿಮಿ ಎಂದೆಲ್ಲ ಕರೆದರು. ನನ್ನ ಸಂಸತ್‌ ಸಹೋದ್ಯೋಗಿಗಳು ಈ ನಿಂದನೆಗಳನ್ನು ಲೆಕ್ಕ ಮಾಡಿ 101 ಬೈಗುಳಗಳು ಎಂದು ಹೇಳಿದರು.

Advertisement

ಎಲೆಕ್ಷನ್‌ ಇದ್ದರೂ, ಇಲ್ಲದಿದ್ದರೂ ವಿಪಕ್ಷಗಳ ನಾಯಕರು ನನ್ನನ್ನು ದೂಷಿಸುತ್ತಲೇ ಇರುತ್ತಾರೆ. ಬೈಗುಳಗಳನ್ನು ಕೇಳಿ ಕೇಳಿ ನಾನೀಗ “ಗಾಲಿ ಪ್ರೂಫ್’ (ಬೈಗುಳ ಅಭೇದ್ಯ) ಆಗಿಬಿಟ್ಟಿದ್ದೇನೆ. ನಿಂದನೆಗಳು ನನಗೆ ಅಭ್ಯಾಸವಾಗಿಬಿಟ್ಟಿದೆ, ನಾನು ಅದಕ್ಕೆ ಒಗ್ಗಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ “ವಿಪಕ್ಷಗಳು “ಮುಸ್ಲಿಂ ಮೀಸಲಾತಿ’ ಎಂಬ ಮೋಸದ ಜಾಲವನ್ನು ಬೀಸಿ, ದೇಶದ ಜನರನ್ನು ವಂಚಿಸುತ್ತಿವೆ. ನಾನು ಅದರ ಬಗ್ಗೆ ದೇಶವಾಸಿಗಳಿಗೆ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ವಿಪಕ್ಷಗಳ ಇಂಥ ಆರೋಪವನ್ನು ನಾನು ತ್ಯಾಜ್ಯ(ಗಾಬೇìಜ್‌) ಎಂದು ಭಾವಿಸುತ್ತೇನೆ ಮತ್ತು ಅದನ್ನು ನಾನು ಗೊಬ್ಬರವಾಗಿ ಮಾರ್ಪಟು ಮಾಡಿ ಮರುಬಳಕೆ(ರೀಸೈಕಲ್‌) ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next