ಲಕ್ನೋ: ಭಾರತದ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ ಸುಮಾರು 10 ಸಾವಿರಕ್ಕೂ ಅಧಿಕ ನಕಲಿ ವೋಟರ್ ಐಡಿಗಳನ್ನು ತಯಾರಿಸಿದ್ದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನಕುರ್ ಪಟ್ಟಣದ ಮಚ್ಚರ ಹೆಡ್ಡಿ ಗ್ರಾಮದ ವಿಪುಲ್ ಸೈನಿ (24) ಎಂದು ಗುರುತಿಸಲಾಗಿದೆ.
ಆತ ಬಿಸಿಎ ಪದವೀಧರನಾಗಿದ್ದು, ಕಳೆದ 3 ತಿಂಗಳಿನಿಂದ ಮಧ್ಯಪ್ರದೇಶದ ಅರ್ಮಾನ್ ಮಲಿಕ್ ಹೆಸರಿನ ವ್ಯಕ್ತಿಯ ಆದೇಶದಂತೆ ಕೆಲಸ ನಕಲಿ ಐಡಿ ತಯಾರಿಸುತ್ತಿದ್ದ. ವಿಪುಲ್‌ಗೆ ಒಂದು ನಕಲಿ ಐಡಿ ತಯಾರಿಸಲು 100-200 ರೂಪಾಯಿ ಕೊಡಲಾಗುತ್ತಿತ್ತು. ಆತನ ಖಾತೆಯಲ್ಲಿ 60 ಲಕ್ಷ ರೂಪಾಯಿ ಡೆಪಾಸಿಟ್ ಆಗಿರುವುದು ಕಂಡುಬಂದಿದೆ.
ಇದನ್ನೂ ಓದಿ:ನೆಹರೂ ಹೊಗಳಿದರೆ ಮಾತ್ರ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ: ಸಚಿವ ಬಿ.ಸಿ.ಪಾಟೀಲ
ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಲಾಗಿದೆ. ವೆಬ್‌ಸೈಟ್ ಮತ್ತು ಅದರ ಮಾಹಿತಿಗಳು ಸುರಕ್ಷಿತವಾಗಿದೆ ಎಂದು ಇಸಿಐ ತಿಳಿಸಿದೆ.