Advertisement
ಅದರಂತೆ ಇನ್ನು ಮುಂದೆ ಕಾರ್ಯಾನುಷ್ಠಾನಕ್ಕೆ ಸಂಪುಟದ ಒಪ್ಪಿಗೆಗೆ ಕಾಯದೇ ನೇರವಾಗಿ ಇಲಾಖೆ ಅಥವಾ ಸಮಿತಿಯ ಒಪ್ಪಿಗೆಯೊಂದಿಗೆ ಕಾಮಗಾರಿ ನಡೆಸಬಹುದಾಗಿದೆ.
Related Articles
ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಶೇ. 17ರಷ್ಟು ವೇತನ ಹಾಗೂ ಪಿಂಚಣಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಒಪ್ಪಿಗೆ ನೀಡಲಾಗಿದೆ. ಸರಕಾರಿ ನೌಕರರಿಗೆ ಈ ಹಿಂದೆ ನೀಡಿದ್ದ ಭರವಸೆ ಅನ್ವಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ 7246.85 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
Advertisement
ಮೀನು ಸಂಸ್ಕರಣ ಸ್ಥಾವರ ಮೇಲ್ದರ್ಜೆಗೆಮಂಗಳೂರಿನ ಕುಳಾಯಿಯಲ್ಲಿರುವ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೀನು ಸಂಸ್ಕರಣ ಸ್ಥಾವರವನ್ನು 25 ಕೋಟಿ ರೂ. ವೆಚ್ಚದಲ್ಲಿ (ಕೇಂದ್ರದ ಪಾಲು 10.92 ಕೋಟಿ) ಸಾಗರೋ ತ್ಪನ್ನಗಳ ರಫ್ತು ಘಟಕವಾಗಿ ಉನ್ನತೀಕರಿಸಲು ಅನುಮೋದನೆ ನೀಡಲಾಗಿದೆ.