Advertisement

ಪಡ್ನವೀಸ್ ಸರ್ಕಾರಕ್ಕೆ 24ಗಂಟೆ ರಿಲೀಫ್, ನಾಳೆ “ಮಹಾ” ಸರ್ಕಾರ ರಚನೆಗೆ ಅಗ್ನಿಪರೀಕ್ಷೆ

09:48 AM Nov 26, 2019 | Nagendra Trasi |

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಅಂತಿಮ ತೀರ್ಪನ್ನು ಮಂಗಳವಾರ 10.30ಕ್ಕೆ ಕಾಯ್ದಿರಿಸಿದೆ.

Advertisement

ಸುಪ್ರೀಂಕೋರ್ಟ್ ನ ಜಸ್ಟೀಸ್ ಗಳಾದ ಎನ್ ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ನೇತೃತ್ವದ ತ್ರಿಸದಸ್ಯ ಪೀಠ ವಾದ, ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸುವ ಮೂಲಕ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ 24 ಗಂಟೆಗಳ ಕಾಲ ರಿಲೀಫ್ ಸಿಕ್ಕಂತಾಗಿದೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ತೆರವುಗೊಳಿಸಿ, ದೇವೇಂದ್ರ ಫಡ್ನವೀಸ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ತೆಗೆದುಕೊಂಡ ನಿರ್ಧಾರ ಪ್ರಶ್ನಿಸಿ ಭಾನುವಾರ ಶಿವಸೇನಾ, ಕಾಂಗ್ರೆಸ್ ಮತ್ತು ಎಸ್ ಸಿಪಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ, ಫಡ್ನವೀಸ್ ಮತ್ತು ಅಜಿತ್ ಪವಾರ್ ಗೆ ನೋಟಿಸ್ ಜಾರಿ ಮಾಡಿತ್ತು.

ರಾಜ್ಯಪಾಲರು ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು 14 ದಿನಗಳ ಕಾಲಾವಕಾಶ ನೀಡಿದ್ದರು ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದಿಸಿದ್ದರು. ಇದರಲ್ಲಿ ಬಹುಮುಖ್ಯವಾದ ಅಂಶವೆಂದರೆ ಹಂಗಾಮಿ ಸ್ಪೀಕರ್, ಪ್ರಮಾಣವಚನ, ಸ್ಪೀಕರ್ ಚುನಾವಣೆ ಮತ್ತು ಅಜೆಂಡಾದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ 24ಗಂಟೆಯೊಳಗೆ ಬಹುಮತ ಸಾಬೀತುಪಡಿಸಿ ಎಂದು ಮಹಾರಾಷ್ಟ್ರ ರಾಜ್ಯಪಾಲರು ನಿರ್ದೇಶನ ನೀಡಲು ಬರುವುದಿಲ್ಲ. ಈ ನಿಟ್ಟಿನಲ್ಲಿ ನಾಳೆಯೇ ಬಹುಮತ ಪರೀಕ್ಷೆ ಸಾಧ್ಯವಿಲ್ಲ ಎಂದು ರೋಹ್ಟಗಿ ವಾದ ಮಂಡಿಸಿದ್ದರು.

ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಮಂಡಿಸಿ, ಕೂಡಲೇ ಬಹುಮತ ಸಾಬೀತು ನಡೆಸಲು ಆದೇಶ ನೀಡಬೇಕು ಎಂದರು. ಸದನದಲ್ಲಿ ಬಹುಮತ ಸಾಬೀತು ಯಾವಾಗ ನಡೆಯುತ್ತದೆ? ಒಂದು ವೇಳೆ 54 ಎನ್ ಸಿಪಿ ಶಾಸಕರ ಸಹಿಯುಳ್ಳ ಪಟ್ಟಿ ಇದೆ ಎಂದಾದರೆ, ಅವರೆಲ್ಲ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಅರ್ಥ. ಆದರೆ ಪತ್ರದಲ್ಲಿ ಸಹಿಯೇ ಇಲ್ಲ. ಇದು ಪ್ರಜಾಪ್ರಭುತ್ವದ ಕೊಲೆ. ಇಂತಹ ಸಂದರ್ಭದಲ್ಲಿ ಬಹುಮತ ಪರೀಕ್ಷೆ ಎಷ್ಟು ಮುಖ್ಯವಾಗುತ್ತದೆ.  ಸದನದ ಹಿರಿಯ ಸದಸ್ಯನನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕಾಗುತ್ತದೆ. ಆ ನಂತರವೇ ಬಹುಮತ ಪರೀಕ್ಷೆ ನಡೆಸಬೇಕಾಗುತ್ತದೆ. ಇದು ಮುಖ್ಯವಾದ ಅಂಶ..ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಲೇ ಈ ಹಿಂದೆ ಸುಪ್ರೀಂಕೋರ್ಟ್ 24 ಗಂಟೆಯಲ್ಲಿಯೇ ಬಹುಮತ ಸಾಬೀತುಪಡಿಸುವಂತಹ ಆದೇಶ ನೀಡಿತ್ತು ಎಂದು ಪ್ರತಿವಾದ ಮಂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next