ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಕ್ರಾಸ್ ನಿಂದ ಮಾಸ್ತಿಕಟ್ಟಾವರೆಗಿನ NH 52 (ಹಳೆಯ NH 63) ರಸ್ತೆಯನ್ನು ನಾಲ್ಕು ಪಥದ ರಸ್ತೆಯ ಅಗಲೀಕರಣಕ್ಕೆ ಕೇಂದ್ರ ಸರಕಾರವು 232 ಕೋಟಿ ರೂಪಾಯಿಯನ್ನು ಮಂಜೂರು ಮಾಡಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ.
ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಾಂದ್ರತೆಯನ್ನು ಆಧರಿಸಿ ಬಾಳೆಗುಳಿ ಕ್ರಾಸ್ ನಿಂದ ಮಾಸ್ತಿಕಟ್ಟಾವರೆಗಿನ 18 ಕಿ.ಮೀ. ರಸ್ತೆ ಅಗಲೀಕರಣ, ಸೇತುವೆ, ವಿದ್ಯುತ್, ಭೂಸ್ವಾಧಿನ ಹಾಗೂ ಅರಣ್ಯೀಕರಣ ಮುಂತಾದ ಕಾಮಗಾರಿಗೆ ಅಗತ್ಯವಿರುವ ಹಣಕ್ಕೆ ಮಂಜೂರಿ ದೊರೆತಿದೆ. ಈಗಾಗಲೇ ರಸ್ತೆಗೆ ಅಗತ್ಯವಿರುವ ಅರಣ್ಯ ಜಾಗಕ್ಕಾಗಿ ಅರಣ್ಯ ಮತ್ತು ಪರಿಸರ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಸದ್ಯ 18ಕಿ.ಮೀ. ರಸ್ತೆಗೆ ಮಂಜೂರಾತಿ ದೊರೆತಿದ್ದು ಹಂತ ಹಂತವಾಗಿ ಯಲ್ಲಾಪುರ ಮುಖಾಂತರ ಹುಬ್ಬಳ್ಳಿವರೆಗೆ ರಸ್ತೆಯನ್ನು ಅಭಿವೃದ್ಧಿಪದಿಸಲಾಗುವುದು ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.