ಚಿಕ್ಕೋಡಿ: ರಾಯಬಾಗ ಕ್ಷೇತ್ರ ವ್ಯಾಪ್ತಿಯ ರಾಯಬಾಗ ತಾಲೂಕಿನಲ್ಲಿಯ ಕುಡಿಯುವ ನೀರಿನ ಸಮಸ್ಯೆ ದೂರು ಮಾಡಲು ರಾಜ್ಯ ಸರ್ಕಾರ 237 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿದೆ. ಶೀಘ್ರವಾಗಿ ಟೆಂಡರ್ ಕರೆದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಚಿಕ್ಕೋಡಿ ತಾಲೂಕಿನ ವಿಜಯನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಯಬಾಗ ತಾಲೂಕಿನ ಮಡ್ಡಿ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕ್ಕಕ್ಕೆ ಹೋಗತ್ತಿತ್ತು. ಈ ಸಮಸ್ಯೆ ದೂರು ಮಾಡಬೇಕೆಂದು ವಿಶೇಷ ಅನುದಾನ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂಧ ಕಾರಜೊಳ ಅವರು ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದು ಕ್ಷೇತ್ರದ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ರಾಯಬಾಗ ತಾಲೂಕಿನ ಬಿರನಾಳ ಸೇರಿ ಇತರೆ 16 ಗ್ರಾಮಗಳಿಗೆ 190 ಕೋಟಿ ರೂ ಮತ್ತು ಕೆಂಪಟ್ಟಿ ಇತರೆ ನಾಲ್ಕು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 47 ಕೋಟಿ ರೂ ಸೇರಿ ಒಟ್ಟು 237 ಕೋಟಿ ರೂ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ಸಿಕ್ಕಿದೆ. ಬರುವ ಎರಡು ತಿಂಗಳ ಒಳಗಾಗಿ ಟಎಂಡರ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕ ಐಹೊಳೆ ತಿಳಿಸಿದರು.
ರಸ್ತೆ-ಬ್ರಿಜ್ ನಿರ್ಮಾಣಕ್ಕೆ ಅನುದಾನ: ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಿಂದ ಬೆಳಗಲಿ ರಸ್ತೆ ನಿರ್ಮಾಣಕ್ಕೆ 70 ಲಕ್ಷ ರೂ ಅನುದಾನ. ಕಬ್ಬೂರ ಗ್ರಾಮದ ಹಳೆ ಸಿದ್ದೇಶ್ವರ ದೇವಸ್ಥಾನದವರೆಗಿನ ರಸ್ತೆ ಮತ್ತು ಬ್ರಿಜ್ ಕಾಮಗಾರಿಗೆ 50 ಲಕ್ಷ ರೂ ಅನುದಾನ ಮಂಜೂರಾಗಿದೆ. ಅದರಂತೆ ಕಬ್ಬೂರ-ಬಾಗೇವಾಡಿ ರಸ್ತೆಯ ವಿಜಯನಗರ ರಸ್ತೆ ಮತ್ತು ಕಾಲುವೆ ಬ್ರಿಜ್ ನಿರ್ಮಾಣಕ್ಕೆ60 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪವನ ಕತ್ತಿ, ಮುಖಂಡ ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೇಮಲಾಪೂರೆ, ಬಸಲಿಂಗ ಕಾಡೇಶಗೊಳ, ಚಿದಾನಂದ ಅಥಣಿ, ರಾಜೇಶ ಶಿರಗೂರ, ಇಂಜನೀಯರ ಎಸ್.ಎಸ್.ಹೊಸಮನಿ, ಸದಾಶಿವ ಶಿರಗೂರ, ಎಸ್.ಕೆ.ಕಾಮಗೌಡ, ಅಮೀರ ಮುಲ್ತಾನಿ, ಮಹಾಂತೇಶ ಶಿರಗೂರ, ಸತೀಶ ಜಾಗನೂರೆ, ಸಿದ್ದು ಖಿಚಿಡಿ ಮುಂತಾದವರು ಇದ್ದರು.