Advertisement
ಎರಡನೇ ಹಂತದ 14 ಕ್ಷೇತ್ರಗಳ ಪೈಕಿ ಬೆಳಗಾವಿಯಲ್ಲಿ ಅತೀ ಹೆಚ್ಚು 57 ಮತ್ತು ರಾಯಚೂರಿನಲ್ಲಿ ಅತೀ ಕಡಿಮೆ 5 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಳಿದಂತೆ ಚಿಕ್ಕೋಡಿಯಲ್ಲಿ 11, ಬಾಗಲಕೋಟೆಯಲ್ಲಿ 14, ವಿಜಯಪುರ 12, ಕಲಬುರಗಿ 12, ಬೀದರ್ 22, ಕೊಪ್ಪಳ 14, ಬಳ್ಳಾರಿ 11, ಹಾವೇರಿ 10, ಧಾರವಾಡ 19, ಉತ್ತರ ಕನ್ನಡ 13, ದಾವಣಗೆರೆ 25 ಮತ್ತು ಶಿವಮೊಗ್ಗದಲ್ಲಿ 12 ಅಭ್ಯರ್ಥಿಗಳು ಇದ್ದಾರೆ.ಈ ಹಂತದಲ್ಲಿ ಕಾಂಗ್ರೆಸ್‌ನ ಮಲ್ಲಿ ಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ವಿ.ಎಸ್. ಉಗ್ರಪ್ಪರಂಥ ಪ್ರಮುಖರು ಅದಷ್ಟ ಪರೀಕ್ಷೆಗೆ ಇಳಿದಿದ್ದರೆ, ಬಿಜೆಪಿಯಿಂದ ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ, ಅನಂತಕುಮಾರ ಹೆಗಡೆ, ಉಮೇಶ ಜಾಧವ ಮೊದಲಾದವರು ಕಣದಲ್ಲಿದ್ದಾರೆ.