Advertisement
ತಾ|ನ 5 ಶಾಲೆಗಳಲ್ಲಿ ಒಟ್ಟು 23 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ವಾರ್ಷಿಕವಾಗಿ ಅವರ ವೇತನಕ್ಕಾಗಿ ಒಟ್ಟು 77.37 ಲಕ್ಷ ರೂ. ಬಿಡುಗಡೆಯಾಗಬೇಕಿತ್ತು. ಆದರೆ ಆರ್‌ಎಂಎಸ್‌ಎ ಕೇಂದ್ರ ಕಚೇರಿಯಿಂದ 2 ಕಂತುಗಳಲ್ಲಿ ನೀಡಿದ 47 ಲಕ್ಷ ರೂ. ಮೊತ್ತ ಬಂಟ್ವಾಳ ತಾ.ಪಂ.ಗೆ ಹೋಗಿದ್ದು, ಅಲ್ಲಿ ಆರ್ ಎಂಎಸ್‌ಎ ಶಿಕ್ಷಕರೇ ಇಲ್ಲ. ತಮ್ಮ ಸಮಸ್ಯೆ ಬಗೆಹರಿಸುವಂತೆ ಶಿಕ್ಷಕರು ಸಚಿವರು, ಶಾಸಕರು, ವಿ.ಪ. ಸದಸ್ಯರು, ಜಿಲ್ಲಾಧಿಕಾರಿಯಲ್ಲಿ ವಿನಂತಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಪ್ರತಿಭಟನ ಸ್ಥಳಕ್ಕೆ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಭೇಟಿ ನೀಡಿ, ಶಿಕ್ಷಕರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಜತೆಗೆ ಡಿಡಿಪಿಐ ವೈ. ಶಿವರಾಮಯ್ಯ ಅವರೂ ಸ್ಥಳಕ್ಕೆ ಆಗಮಿಸಿ ಶಿಕ್ಷಕರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ.
ಶಿಕ್ಷಕರ ಪ್ರತಿಭಟನೆಯ ವಿಚಾರ ತಿಳಿದು ಡಿಡಿಪಿಐ ಅವರು ಸ್ವತಃ ಮಂಗಳೂರಿನಿಂದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಆದರೆ ಆಗ ಕಚೇರಿಯಲ್ಲಿರಬೇಕಾದ ಬಿಇಒ ಅಲ್ಲಿರಲಿಲ್ಲ. ಸಭೆಯಲ್ಲಿ ಭಾಗವಹಿಸುವುದಕ್ಕೆ ತೆರಳಿದ್ದರು ಎಂದು ಕಚೇರಿಯ ಸಿಬಂದಿ ತಿಳಿಸಿದರು. ಪ್ರಯತ್ನದಲ್ಲಿದ್ದೇನೆ
ತಾನು ಬೆಂಗಳೂರಿನಲ್ಲಿದ್ದು, ಇದೇ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇನೆ. ಈಗಾಗಲೇ ಪ್ರಿನ್ಸಿಪಲ್ ಸೆಕ್ರೆಟರಿ ಜತೆ ಮಾತುಕತೆ ನಡೆಸಿದ್ದು, ಹಣಕಾಸು ವಿಭಾಗದೊಂದಿಗೆ ಮಾತನಾಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸೆ. 5ರೊಳಗೆ ಅವರ ವೇತನ ಸಿಗುವಂತೆ ಮಾಡುವ ಪ್ರಯತ್ನದಲ್ಲಿದ್ದು, ಅದು ಈಡೇರುವ ಭರವಸೆ ಇದೆ.
– ಹರೀಶ್ ಪೂಂಜ
ಶಾಸಕರು, ಬೆಳ್ತಂಗಡಿ